Select Your Language

Notifications

webdunia
webdunia
webdunia
webdunia

ಬಜರಂಗದಳಕ್ಕೆ ಪಿಎಫ್ಐ ಹೋಲಿಕೆ : ಮಲ್ಲಿಕಾರ್ಜುನ ಖರ್ಗೆಯ ಸಮನ್ಸ್

ಬಜರಂಗದಳಕ್ಕೆ ಪಿಎಫ್ಐ ಹೋಲಿಕೆ : ಮಲ್ಲಿಕಾರ್ಜುನ ಖರ್ಗೆಯ ಸಮನ್ಸ್
ಚಂಡೀಗಢ , ಸೋಮವಾರ, 15 ಮೇ 2023 (14:11 IST)
ಚಂಡೀಗಢ : ಬಜರಂಗದಳದ ವಿರುದ್ಧ ಹೇಳಿಕೆ ನೀಡಿದ ವಿಚಾರವಾಗಿ ಪಂಜಾಬ್ನ ಸಂಗ್ರೂರ್ ಸ್ಥಳೀಯ ನ್ಯಾಯಾಲಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಮನ್ಸ್ ಜಾರಿ ಮಾಡಿದೆ. ಜುಲೈ 10 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.
 
ಕಾಂಗ್ರೆಸ್ ಬಜರಂಗದಳವನ್ನು ದೇಶವಿರೋಧಿ ಸಂಘಟನೆಗಳೊಂದಿಗೆ ಹೋಲಿಸಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ. ಇದು ಅಪಾರ ಕಾರ್ಯಕರ್ತರಿಗೆ ಮಾಡಿರುವ ಅಪಮಾನವಾಗಿದೆ ಎಂದು ಹಿಂದೂ ಸುರಕ್ಷಾ ಪರಿಷತ್ ಭಜರಂಗದಳ ಸಂಸ್ಥಾಪಕ ಸಂಗ್ರೂರ್ ಮೂಲದ ಹಿತೇಶ್ ಭಾರದ್ವಾಜ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. 

ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣಾ ಪ್ರಚಾರದ ವೇಳೆ ಖರ್ಗೆಯವರು ಪಿಎಫ್ಐ ಜೊತೆ ಬಜರಂಗದಳವನ್ನು ಹೋಲಿಸಿ ಟೀಕಿಸಿದ್ದಾರೆ. ಇದು ಅವಹೇಳನಕಾರಿ ವಿಚಾರವಾಗಿದೆ ಎಂದು ಅರ್ಜಿದಾರರು ಆರೋಪಿಸಿ ನ್ಯಾಯಾಲಯದಲ್ಲಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಎಂದು ಮನೆ ಮುಂದೆ ಘೋಷಣೆ