Select Your Language

Notifications

webdunia
webdunia
webdunia
webdunia

ಸಚಿವರ ಖಾತೆ ಲಾಕ್ ಮಾಡಿದ ಟ್ವಿಟರ್ ಗೆ ನೋಟಿಸ್

ಸಚಿವರ ಖಾತೆ ಲಾಕ್ ಮಾಡಿದ ಟ್ವಿಟರ್ ಗೆ ನೋಟಿಸ್
ನವದೆಹಲಿ , ಬುಧವಾರ, 30 ಜೂನ್ 2021 (13:33 IST)
ನವದೆಹಲಿ: ಮೊನ್ನೆಯಷ್ಟೇ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಸಂಸದ ಶಶಿ ತರೂರ್ ಖಾತೆಗಳನ್ನು ಕಾಪಿ ರೈಟ್ ನೆಪ ಹೇಳಿ ಲಾಕ್ ಮಾಡಿದ್ದ ಟ್ವಿಟರ್ ವಿರುದ್ಧ ಸಂಸದೀಯ ಸ್ಥಾಯಿ ಸಮಿತಿ ವಿವರಣೆ ಕೋರಿ ನೋಟಿಸ್ ನೀಡಿದೆ.


ಒಂದೆಡೆ ಕೇಂದ್ರದ ಹೊಸ ಐಟಿ ನಿಯಮಗಳನ್ನು ಪಾಲಿಸುವ ವಿಚಾರದಲ್ಲಿ ಸಂಘರ್ಷ ನಡೆಸುತ್ತಿರುವ ಟ್ವಿಟರ್ ಇದರ ಬೆನ್ನಲ್ಲೇ ಸಚಿವರು ಮತ್ತು ಸಂಸದರ ಖಾತೆಗಳನ್ನು ಲಾಕ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಟ್ವಿಟರ್ ಸಂಸ್ಥೆಯಿಂದ ವಿವರಣೆ ಕೇಳುವುದಾಗಿ ಶಶಿ ತರೂರ್ ಹೇಳಿದ್ದರು.

ಇದೀಗ ಸಂಸದೀಯ ಸ್ಥಾಯಿ ಸಮಿತಿ 48 ಗಂಟೆಯೊಳಗೆ ಲಿಖಿತ ರೂಪದಲ್ಲಿ ವಿವರಣೆ ನೀಡುವಂತೆ ತಾಕೀತು ಮಾಡಿದೆ. ಈ ನಡುವೆ ಭಾರತದ ಭೂಪಟವನ್ನು ತಪ್ಪಾಗಿ ಚಿತ್ರಿಸಿದ್ದ ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ವಿರುದ್ಧ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

500 ರೂ. ಕೊಡಲಿಲ್ಲವೆಂದು ಸ್ನೇಹಿತನಿಗೆ ಹೀಗೆ ಮಾಡೋದಾ?!