Publish Date: Thu, 02 Jun 2022 (11:00 IST)
Updated Date: Thu, 02 Jun 2022 (10:06 IST)
ಹೈದರಾಬಾದ್: ಅನ್ಯ ಕೋಮಿನ ಯುವಕನ ಜೊತೆ ಪ್ರೀತಿಸಿ ಓಡಿ ಹೋಗಿದ್ದ ಮಗಳನ್ನು ಪೋಷಕರೇ ಕತ್ತು ಸೀಳಿ ಕೊಲೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮಗಳು ಅನ್ಯ ಕೋಮಿನ ಯುವಕನ ಜೊತೆ ಓಡಿ ಹೋಗಿ ಜೊತೆಯಾಗಿ ಜೀವನ ಮಾಡುತ್ತಿದ್ದಳು. ಆದರೆ ಪೋಷಕರು ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಹೀಗಾಗಿ ಪೊಲೀಸರು ವಿಚಾರಣೆ ನಡೆಸಿ ಯುವಕನನ್ನು ವಶಕ್ಕೆ ಪಡೆದು ಯುವತಿಯನ್ನು ಪೋಷಕರ ಬಳಿಗೊಪ್ಪಿಸಿದ್ದರು.
ಆದರೆ ಮನೆಗೆ ಬಂದ ಮಗಳ ಜೊತೆ ನಿತ್ಯವೂ ವಾಗ್ವಾದವಾಗುತ್ತಿತ್ತು. ಮನೆಗೆ ಅವಮಾನ ಮಾಡಿದ ಮಗಳನ್ನು ಕೊನೆಗೆ ಪೋಷಕರೇ ಕೊಲೆ ಮಾಡಿದ್ದಾರೆ. ಇದೀಗ ಪೊಲೀಸರು ಪೋಷಕರಿಬ್ಬರನ್ನೂ ಬಂಧಿಸಿದ್ದಾರೆ.