Publish Date: Thu, 02 Jun 2022 (08:40 IST)
Updated Date: Thu, 02 Jun 2022 (09:17 IST)
ತಿರುಚ್ಚಿ: ತನ್ನ ಪ್ರೀತಿ ಪ್ರಸ್ತಾಪ ನಿರಾಕರಿಸಿದ 16 ವರ್ಷದ ಯುವತಿಯನ್ನು ಮನಬಂದಂತೆ ಇರಿದು ತೀವ್ರವಾಗಿ ಗಾಯಗೊಳಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
16 ವರ್ಷದ ಪಿಯು ವಿದ್ಯಾರ್ಥಿನಿಯಾಗಿದ್ದ ಯುವತಿಯನ್ನು 22 ವರ್ಷದ ಯುವಕ ಪ್ರೀತಿಸುತ್ತಿದ್ದ. ಆದರೆ ಆಕೆ ನಿರಾಕರಿಸಿದ್ದಳು. ಇದರಿಂದಾಗಿ ಆಕೆಯ ಮೇಲೆ ಆಕ್ರೋಶಗೊಂಡಿದ್ದ ಯುವಕ 14 ಬಾರಿ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಈ ಯುವಕನಿಗೆ ಅಪರಾಧ ಹಿನ್ನಲೆಯಿತ್ತು. ಈ ಮೊದಲು ಜೈಲಿನಿಂದ ರಿಲೀಸ್ ಆಗಿದ್ದ. ಈಗ ಅಪ್ರಾಪ್ತೆಯ ಬೆನ್ನುಬಿದ್ದಿದ್ದ. ಈ ಬಗ್ಗೆ ಬಾಲಕಿ ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದಳು. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ತೀವ್ರ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.