Publish Date: Thu, 02 Jun 2022 (09:00 IST)
Updated Date: Thu, 02 Jun 2022 (09:13 IST)
ಹೈದರಾಬಾದ್: ಪತ್ನಿಯನ್ನು ಕೊಂದು ಮೃತದೇಹವನ್ನು ನದಿಗೆ ಎಸೆದಿದ್ದ ಟೆಕಿ ಪತಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಐದು ತಿಂಗಳ ಹಿಂದೆ ಘಟನೆ ನಡೆದಿತ್ತು. ಗೆಳೆಯನ ಜೊತೆಗೂಡಿ ಪತಿ ಪತ್ನಿಯ ಕೊಲೆ ಮಾಡಿದ್ದ. ಬಳಿಕ ಪೊಲೀಸರ ಬಳಿ ಹೋಗಿ ಪತ್ನಿ ಕಾಣೆಯಾಗಿರುವುದಾಗಿ ದೂರು ಕೊಟ್ಟು ನಾಟಕವಾಡಿದ್ದ.
ಆದರೆ ಇತ್ತೀಚೆಗೆ ಅಳಿಯನ ವರ್ತನೆಯಿಂದ ಸಂಶಯಗೊಂಡಿದ್ದ ಅತ್ತೆ-ಮಾವ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ಕೃತ್ಯ ಬಾಯ್ಬಿಟ್ಟಿದ್ದಾನೆ. ಸೂಟ್ ಕೇಸ್ ನಲ್ಲಿ ಮೃತದೇಹ ತುಂಬಿ ನದಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇಬ್ಬರ ನಡುವೆ ದಾಂಪತ್ಯ ಕಲಹವಿತ್ತು. ಇದೇ ವಿಚಾರಕ್ಕೆ ಕೃತ್ಯವೆಸಗಿರುವುದಾಗಿ ಹೇಳಿದ್ದಾನೆ.