Select Your Language

Notifications

webdunia
webdunia
webdunia
webdunia

ವಾದಕ ಪಂಡಿತ್ ಶಿವಕುಮಾರ್ ಶರ್ಮಾ ವಿಧಿವಶ

ವಾದಕ ಪಂಡಿತ್ ಶಿವಕುಮಾರ್ ಶರ್ಮಾ ವಿಧಿವಶ
ಮುಂಬೈ , ಮಂಗಳವಾರ, 10 ಮೇ 2022 (14:18 IST)
ಮುಂಬೈ : ಖ್ಯಾತ ಸಂಗೀತಗಾರ ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ(84) ಅವರು ವಿಧಿವಶರಾಗಿದ್ದಾರೆ.

6 ತಿಂಗಳಿನಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶಿವಕುಮಾರ್ ಅವರು ಡಯಾಲಿಸಿಸ್ ಪಡೆಯುತ್ತಿದ್ದರು. ಆದರೆ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಕುಮಾರ್ ಶರ್ಮಾ ಅವರು ಸಂಗೀತ ನಿರ್ದೇಶಕರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. 

ಜಮ್ಮುವಿನಲ್ಲಿ ಜನಿಸಿದ ಪಂಡಿತ್ ಶಿವಕುಮಾರ್ ಶರ್ಮಾ ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ಸಂತೂರ್ ನುಡಿಸುವುದನ್ನು ಕಲಿಯಲು ಪ್ರಾರಂಭಿಸಿದರು. 1955ರಲ್ಲಿ ಮೊದಲ ಬಾರಿಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಸಂತೂರ್ ಪ್ರದರ್ಶನ ನೀಡುವ ಮೂಲಕ ಸಂತೂರ್ನನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಶಿವಕುಮಾರ್ ಶರ್ಮಾ ಅವರು 1956ರ ಝಣಕ್ ಝಣಕ್ ಪಾಯಲ್ ಬಜೆ ಚಿತ್ರದ ಒಂದು ದೃಶ್ಯಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ನಾಲ್ಕು ವರ್ಷಗಳ ನಂತರ ಶಿವಕುಮಾರ್ ಶರ್ಮಾ ಮೊದಲ ಬಾರಿಗೆ ಒಬ್ಬರೇ ಆಲ್ಬಂ ರೆಕಾರ್ಡ್ ಮಾಡಿದರು. 

 


Share this Story:

Follow Webdunia kannada

ಮುಂದಿನ ಸುದ್ದಿ

ಜೂನ್‌ 3ಕ್ಕೆ 7 ಸ್ಥಾನಕ್ಕೆ ವಿಧಾನ‌ ಪರಿಷತ್ ಚುನಾವಣೆ ದಿನಾಂಕ ಘೋಷಣೆ!