ದೆಹಲಿ ಪಾಲಿಕೆ ಇವತ್ತೂ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು. AAP ಮತ್ತು BJP ಸದಸ್ಯರು ಪರಸ್ಪರ ಸಂಘರ್ಷಕ್ಕೆ ಇಳಿದ ಘಟನೆ ನಡೆಯಿತು. ಘೋಷಣೆಗಳ ನಡುವೆ AAP ಮತ್ತು BJP ಪರಸ್ಪರ ಘರ್ಷಣೆಯನ್ನು ಮುಂದುವರೆಸಿದ್ದರಿಂದ ಕಲಾಪ ಮುಂದೂಡಲಾಯಿತು. ನಾಳೆಗೆ 10 ಗಂಟೆಗೆ ಕಲಾಪ ಮೂಂದೂಡಿಕೆ ಮಾಡಿದ್ರು. ಎರಡು ದಿನದ ಅವಧಿಯಲ್ಲಿ 7 ಬಾರಿ ಸಭೆ ಮುಂದೂಡಿಕೆಯಾಯಿತು. ಬುಧವಾರ ಐದನೇ ಬಾರಿಗೆ ಸದನವನ್ನು ಮುಂದೂಡಲಾಗಿತ್ತು. ದೆಹಲಿ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಭರ್ಜರಿ ಗೆಲುವು ಸಾಧಿಸಿದ್ದರು. ಎಎಪಿಯು 150 ಮತ ಗಳಿಸುವ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿತ್ತು. ಚುನಾವಣೆ ವೇಳೆ ಕೌನ್ಸಿಲರ್ಗಳು ಮೊಬೈಲ್ ಮೂಲಕ ಮತ ಯಂತ್ರಗಳ ಚಿತ್ರವನ್ನು ತೆಗೆಯುತ್ತಿದ್ದರು, ಇದು ಮತದಾನ ಉಲ್ಲಂಘನೆಯಾದಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಆಗ ಗದ್ದಲ ಶುರುವಾಗಿತ್ತು, ಹಾಗಾಗಿ ಈ ಮತಗಳನ್ನು ತಿರಸ್ಕರಿಸಿ ಹೊಸದಾಗಿ ಚುನಾವಣೆ ನಡೆಸಿ ಎಂದು ಒತ್ತಾಯಿಸಿದೆ.