Select Your Language

Notifications

webdunia
webdunia
webdunia
webdunia

‘ಅಲ್ಲಾ’ ಎಂಬ ಪದ ಸಂಸ್ಕೃತದಿಂದ ಬಂದಿದೆ: ನಿಶ್ಚಲಾನಂದ ಸರಸ್ವತಿ

‘ಅಲ್ಲಾ’ ಎಂಬ ಪದ ಸಂಸ್ಕೃತದಿಂದ ಬಂದಿದೆ: ನಿಶ್ಚಲಾನಂದ ಸರಸ್ವತಿ
ಲಕ್ನೋ , ಗುರುವಾರ, 23 ಫೆಬ್ರವರಿ 2023 (14:34 IST)
ಲಕ್ನೋ : ‘ಅಲ್ಲಾ’ ಎಂಬ ಪದ ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತದಿಂದ ಬಂದಿದೆ ಎಂದು ವಾರಣಾಸಿಯ ಗೋವರ್ಧನ ಪುರಿ ಮಠದ ಮುಖ್ಯಸ್ಥರಾದ ನಿಶ್ಚಲಾನಂದ ಸರಸ್ವತಿ ಹೇಳಿಕೆ ನೀಡಿದ್ದಾರೆ.

ಅಲ್ಲಾ ಎಂಬ ಪದ ಹೆಣ್ತನದ ಶಕ್ತಿಯನ್ನು ಸೂಚಿಸುತ್ತದೆ. ಈ ಪದವನ್ನು ದುರ್ಗಾ ದೇವಿಯನ್ನು ಪ್ರಾರ್ಥಿಸಲು ಬಳಸಲಾಗುತ್ತದೆ. ಜಗತ್ತಿನಲ್ಲಿ ಇರುವುದು ಕೇವಲ ಒಂದೇ ಧರ್ಮ. ಅದು ಹಿಂದೂ ಸನಾತನ ಧರ್ಮ.

ಉಳಿದ ಎಲ್ಲಾ ಧರ್ಮಗಳು ಕೇವಲ ಪಂಗಡಗಳು. ಧರ್ಮದ ಬಗ್ಗೆ ಪ್ರಶ್ನೆಯನ್ನು ಎತ್ತುವವರು ಮೊದಲು ಸಂಸ್ಕೃತ ವ್ಯಾಕರಣವನ್ನು ಕಲಿತುಕೊಳ್ಳಿ ಎಂದು ಹೇಳಿದರು.

‘ಅಲ್ಲಾ’ ಮತ್ತು ‘ಓಂ’ ಪದಗಳೆರಡೂ ಒಂದೇ ಎಂಬ ಮೌಲಾನಾ ಸೈಯದ್ ಅರ್ಷದ್ ಮದನಿಯವರ ಹೇಳಿಕೆಯನ್ನು ಟೀಕಿಸಿದ ನಿಶ್ಚಲಾನಂದ ಸರಸ್ವತಿ, ಬೇರೆ ಧರ್ಮದ ಗ್ರಂಥಗಳ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇಲ್ಲ. ರಾಮಚರಿತಮಾನಸಗಳನ್ನು ಪ್ರಶ್ನಿಸುವವರು ಚಾಣಕ್ಯ ನೀತಿಯನ್ನು ಓದಬೇಕು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿಚಕ್ರ ವಾಹನ ಸಿಕ್ಕಿಬಿದ್ರೆ 5 ಸಾವಿರ ದಂಡ!