Select Your Language

Notifications

webdunia
webdunia
webdunia
webdunia

ದ್ವಿಚಕ್ರ ವಾಹನ ಸಿಕ್ಕಿಬಿದ್ರೆ 5 ಸಾವಿರ ದಂಡ!

ದ್ವಿಚಕ್ರ ವಾಹನ ಸಿಕ್ಕಿಬಿದ್ರೆ 5 ಸಾವಿರ ದಂಡ!
ನವದೆಹಲಿ , ಗುರುವಾರ, 23 ಫೆಬ್ರವರಿ 2023 (14:24 IST)
ನವದೆಹಲಿ: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ದ್ವಿಚಕ್ರ ವಾಹನ ಸವಾರರು ಸಿಕ್ಕಿಬಿದ್ದರೆ 5 ಸಾವಿರ ರೂ. ದಂಡವನ್ನು ವಿಧಿಸಲಾಗುತ್ತದೆ.

ಪ್ರಧಾನಿ ಮೋದಿ ಫೆ.15 ಎಂದು ಮುಂಬೈ- ದೆಹಲಿ ಎಕ್ಸ್ಪ್ರೆಸ್ವೇಯ ಮೊದಲ ಹಂತವಾದ 246 ಕಿ.ಮೀ ಉದ್ದದ ರಸ್ತೆಯನ್ನು ಲೋಕಾರ್ಪಣೆ ಮಾಡಿದ್ದರು. ಲೋಕಾರ್ಪಣೆಯಾದ ಬಳಿಕ ಬೈಕ್ ಸವಾರರು ಮತ್ತು ಸೈಕಲ್ ಸವಾರರು ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.

ಅಷ್ಟೇ ಅಲ್ಲದೇ ರಸ್ತೆ ಪಿಕ್ನಿಕ್ ಸ್ಥಳವಾಗಿ ಬದಲಾಗಿದ್ದು ಗ್ರಾಮಸ್ಥರು ಬೇಲಿಯನ್ನು ಹಾರಿ ಎಕ್ಸ್ಪ್ರೆಸ್ವೇಗೆ ಇಳಿಯುತ್ತಿದ್ದಾರೆ.

ಎಕ್ಸ್ಪ್ರೆಸ್ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿ.ಮೀ ವೇಗದಲ್ಲಿ ಸಂಚಾರಕ್ಕೆ ಅನುಮತಿ ನೀಡಿದ್ದರೂ ವಾಹನಗಳು ಇದಕ್ಕಿಂತಲೂ ವೇಗದಲ್ಲಿ ಸಂಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಗರಿಷ್ಠ ಮಿತಿಗಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸಿದ ವಾಹನಗಳಿಗೆ ದಂಡ ವಿಧಿಸುತ್ತಿದ್ದಾರೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನವರಂತೆ ನಾನು ತಿಂದು ಹೊಗಿದ್ದೆ ಏನ್ ಈಗ ಅಂತ ನಾನು ಹೇಳಲ್ಲ- ಸಿಟಿ ರವಿ