Select Your Language

Notifications

webdunia
webdunia
webdunia
webdunia

ಏರ್‌ಏಷ್ಯಾ ಇಂಡಿಯಾಗೆ 44 ಲಕ್ಷ ದಂಡ

DGCA
ನವದೆಹಲಿ , ಸೋಮವಾರ, 13 ಫೆಬ್ರವರಿ 2023 (14:20 IST)
ನವದೆಹಲಿ : ನಾಗರಿಕ ವಿಮಾನಯಾನ ಸಂಸ್ಥೆಯ ಅಗತ್ಯ ನಿಯಮಗಳ ಉಲ್ಲಂಘನೆ ಹಿನ್ನೆಲೆ ಏರ್ಏಷ್ಯಾ ವಿಮಾನಯಾನ ಸಂಸ್ಥೆಗೆ ಆಉಅಂ 44 ಲಕ್ಷ ರೂ. ಆರ್ಥಿಕ ದಂಡ ವಿಧಿಸಿದೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 20 ಮತ್ತು 24 ಲಕ್ಷ ದಂಡವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಧಿಸಿದೆ.

ಕಳೆದ ವರ್ಷದ ನವೆಂಬರ್ 22 -25 ವರೆಗೂ ಏರ್ಏಷ್ಯಾ ಲಿಮಿಟೆಡ್ ಮೇಲೆ ಕಣ್ಗಾವಲು ತಪಾಸಣೆ ನಡೆಸಿತ್ತು. ತಪಾಸಣೆ ವೇಳೆ ಏರ್ ಏಷ್ಯಾ ಪೈಲಟ್ಗಳು ಕಡ್ಡಾಯ ನಿಯಮಗಳನ್ನು ಪಾಲಿಸಿಲ್ಲ.

ನಿಗದಿತ ವೇಳಾಪಟ್ಟಿಯಂತೆ ಪೈಲಟ್ ಪ್ರೊಫಿಷಿಯನ್ಸಿ ಚೆಕ್/ಇನ್ಸ್ಟ್ರುಮೆಂಟ್ ರೇಟಿಂಗ್ ಚೆಕ್ ಮಾಡಿಲ್ಲ. ಇದು ಅಂತಾರಾಷ್ಟ್ರೀಯ ಸಿವಿಲ್ ಏವಿಯೇಷನ್ ಆರ್ಗನೈಸೇಶನ್ ಕಡ್ಡಾಯ ನಿಯಮವಾಗಿರುವ ಹಿನ್ನೆಲೆ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣೀರು ಹಾಕಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ