Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಫೈನ್ ಕಟ್ಟಲು ಮುಗಿಬಿದ್ದ ವಾಹನ ಸವಾರರು

ಟ್ರಾಫಿಕ್ ಫೈನ್ ಕಟ್ಟಲು ಮುಗಿಬಿದ್ದ ವಾಹನ ಸವಾರರು
bangalore , ಶನಿವಾರ, 11 ಫೆಬ್ರವರಿ 2023 (20:34 IST)
ಟ್ರಾಫಿಕ್ ಫೈನ್ ಕಟ್ಟಲು ಸರ್ಕಾರ ಕೊಟ್ಟಿದ್ದ 50% ಡಿಸ್ಕೌಂಟ್ ಆಫರ್ ಗೆ  ಇಂದೇ ಕೊನೆ ದಿನ. ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಇಂದು ವಾಹನ ಸವಾರರು ನಾ ಮುಂದು ತಾ ಮುಂದು ಅಂತ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಟಿಎಂಸಿ ಕೇಂದ್ರದಲ್ಲಿ ಕ್ಯೂ ನಿಂತಿದ್ದರು.ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಬಾಕಿ ಉಳಿಸಿಕೊಂಡಿರುವ ವಾಹನಗಳ ದಂಡ ಕಟ್ಟಲು ಸರ್ಕಾರ ೫೦% ರಿಯಾಯಿತಿ ನೀಡಿದ್ದರು. 50% ಡಿಸ್ಕೌಂಟ್ ಗೆ ಇಂದು ಕೊನೆಯ ದಿನವಾದ್ದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ವಾಹನ ಸವಾರರು ಇಂದು ದಂಡ ಕಟ್ಟಲು ಮುಗಿಬಿದ್ದಿದ್ದಾರೆ.  ನಗರದ ಪೊಲೀಸ್ ಠಾಣೆಗಳು, ಟಿಎಂಸಿ ಕೇಂದ್ರ ಕಚೇರಿ ಹಾಗೂ ಪೇಟಿಎಂ ಮತ್ತು ಪಿಡಿಎ ಮೂಲಕ ಲಕ್ಷಾಂತರ ಮಂದಿ ವಾಹನ ಸವಾರರು ಇಂದು ದಂಡ ಕಟ್ಟಿದ್ದಾರೆ.

ಫೈನ್ ಕಟ್ಟಲು ಇಂದು ಲಾಸ್ಟ್ ಡೇ ಅಂತ ತಿಳಿದ ವಾಹನ ಸವಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ವಾಹನಗಳ ಮೇಲಿರುವ ಹಳೇ ಕೇಸ್ ಗಳ ದಂಡ ಪಾವತಿ ಮಾಡಿದರು. ಇದೇ ವೇಳೆ ಕೆಲವು ಸವಾರರು ಈ ಕಾಲಾವಕಾಶ ಸಾಗುತ್ತಿಲ್ಲ. ರಿಯಾಯಿತಿ ದಂಡ ಪಾವತಿಗೆ ಇನ್ನೂ ಒಂದು ವಾರ ಕಾಲಾವಕಾಶ ವಿಸ್ತರಣೆ ಮಾಡಬೇಕು ಅಂತ ಒತ್ತಾಯ ಮಾಡಿದ್ದಾರೆ. ಅಲ್ಲದೆ ಕೆಲವರ ಬಳಿ ಹಣ ಇರುತ್ತೆ, ಇನ್ನೂ ಕೆಲವರ ಬಳಿ ಹಣ ಇರಲ್ಲ. ಹಾಗೂ ಸರ್ವರ್ ಗಳು ಇವತ್ತು ಜಾಮ್ ಆಗಿದ್ದು, ದಂಡ ಕಟ್ಟಲು ಸಾಧ್ಯವಾಗುತ್ತಿಲ್ಲ ಅದ್ದರಿಂದ ಇನ್ನೂ ನಾಲ್ಕೈದು ದಿನಗಳ ಕಾಲ ಸಮಯ ಕೊಡಬೇಕು ಅಂತ ಒತ್ತಾಯ ಮಾಡಿದ್ದಾರೆ.

ಇನ್ನೂ ಟ್ರಾಫಿಕ್ ಫೈನ್ ಕಟ್ಟಲು ರಿಯಾಯಿತಿ ಘೋಷಣೆ ಬಳಿಕ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದೆ. ಫೆಬ್ರವರಿ 3 ರಿಂದ ಇಂದಿನವರೆಗೆ ಸುಮಾರು ೩೫ ಲಕ್ಷ ಟ್ರಾಫಿಕ್ ಕೇಸ್ ಗಳಲ್ಲಿ 102 ಕೋಟಿ ದಂಡವನ್ನ ಟ್ರಾಫಿಕ್ ಪೊಲೀಸರು ಕಲೆಕ್ಟ್ ಮಾಡಿದ್ದಾರೆ. 
 
ಹಾಗಾದ್ರೆ ಯಾವ್ಯಾವ ದಿನ ಎಷ್ಟೆಷ್ಟು ದಂಡ ವಸೂಲಾಗಿದೆ ಅಂತಾ ನೋಡೊದಾದ್ರೆ.
Gfx in.. 
3Feb - 2.24 ಲಕ್ಷ ಕೇಸ್, 7 ಕೋಟಿ ದಂಡ.
4Feb - 3 ಲಕ್ಷ ಕೇಸ್, 9 ಕೋಟಿ ದಂಡ.
5Feb - 2.87 ಲಕ್ಷ ಕೇಸ್, 7.49 ಕೋಟಿ ದಂಡ.
6Feb - 3.34 ಲಕ್ಷ ಕೇಸ್, 9.57 ಕೋಟಿ ದಂಡ.
7Feb - 3.45 ಲಕ್ಷ ಕೇಸ್, 9.70 ಕೋಟಿ ದಂಡ.
8Feb- 3.87 ಲಕ್ಷ ಕೇಸ್, 10 ಕೋಟಿ ದಂಡ.
9Feb- 5.51 ಲಕ್ಷ ಕೇಸ್, 14.64 ಕೋಟಿ ದಂಡ.
10Feb- 6.70 ಲಕ್ಷ ಕೇಸ್,17.61 ಕೋಟಿ ದಂಡ.
11Feb- 3.85 ಲಕ್ಷ ಕೇಸ್, 12.52 ಕೋಟಿ ದಂಡ (ಮಧ್ಯಾಹ್ನ ಮೂರು ಗಂಟೆ)

ಟ್ರಾಫಿಕ್ ಫೈನ್ ಕಟ್ಟಲು ಫೆಬ್ರವರಿ 3 ರಿಂದ ವಾಹನ ಸವಾರರಿಗೆ ರಿಯಾಯಿತಿ ನೀಡಲಾಗಿದೆ. ಕಳೆದ ಒಂಭತ್ತು ದಿನಗಳಲ್ಲಿ ಒಟ್ಟು 35.60 ಲಕ್ಷ ಕೇಸ್ ಗಳಲ್ಲಿ 102 ಕೋಟಿ ದಂಡವನ್ನ ಟ್ರಾಫಿಕ್ ಪೊಲೀಸರು ಸಂಗ್ರಹ ಮಾಡಿದ್ದಾರೆ. ಅಲ್ಲದೇ ಇಂದು ಕೊನೆ ದಿನವಾದ್ದರಿಂದ ದಂಡದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂ.ಮ.ಸಾ.ಸಂಸ್ಥೆಯಿಂದ ವಿಶೇಷ ಸಾರಿಗೆ ವ್ಯವಸ್ಥೆ