Publish Date: Sat, 11 Feb 2023 (20:22 IST)
Updated Date: Sat, 11 Feb 2023 (20:28 IST)
ಬಿಲ್ಡಿಂಗ್ ಡೆಮಾಲಿಷನ್ ವೇಳೆ ಅವಘಡ ಸಂಭವಿಸಿ ಇಬ್ಬರು ಕಾರ್ಮಿಕರ ಸಾವಾನಾಪ್ಪಿದ್ದಾರೆ.ಪಶ್ಚಿಮ ಬಂಗಳಾದ ಇಬ್ಬರು ಕೂಲಿ ಕಾರ್ಮಿಕರು ದುರ್ಮರಣಕ್ಕಿಡಾಗಿದ್ದು,ಮಹಾಲಕ್ಷ್ಮೀ ಲೇಔಟ್ ಹತ್ತನೇ ಕ್ರಾಸ್ ಬಳಿ ಘಟನೆ ನಡೆದಿದೆ.ಇನಾಮ್ ಉಲ್ಲಾ, ಸಿರಾಜ್ ಉಲ್ಲಾ ಮೃತ ದುರ್ದೈವಿಗಳಾಗಿದ್ದಾರೆ.ಹಳೇ ಕಟ್ಟಡದ ಪಿಲ್ಲರ್ ಕುಸಿದು ಅವಘಡ ಸಂಭವಿಸಿದೆ
ಒಂದು ವಾರದಿಂದ ಕಾರ್ಮಿಕರು ಕೆಲಸ ಮಾಡುತ್ತಿದ್ದರು.ಆರು ಮಂದಿ ಬಿಲ್ಡಿಂಗ್ ತೆರವು ಮಾಡುತ್ತಿದ್ದರು.ಸೂಕ್ತ ಮುಂಜಾಗ್ರತೆ ತೆಗೆದುಕೊಳ್ಳದೆ ಬಿಲ್ಡಿಂಗ್ ತೆರವು ಮಾಡುತ್ತಿದ್ದರು.ಹೀಗಾಗಿ ಪಿಲ್ಲರ್ ಕುಸಿದು ಕಾರ್ಮಿಕರು ಮೃತಪಟ್ಟಿದ್ದಾರೆ.ಮೃತ ದೇಹಗಳು ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಘಟನ ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.