ನವದೆಹಲಿ: ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ವೇಳೆ ಸಾವನ್ನಪ್ಪಿದ ಜೈಶ್ ಎ ಮೊಹಮ್ಮದ್ ಉಗ್ರ ಸಂಘನೆಯ ಸದಸ್ಯರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಹಲ್ಪುರದಲ್ಲಿರುವ ಸೇನಾ ಅಧಿಕಾರಿಗೆ ಒಪಾಕ್ ಸೇನಾ ಮುಖ್ಯಸ್ಥ ನಿರ್ದೇಶನ ನೀಡಿರುವುದು ಬಹಿರಂಗವಾಗಿದೆ.
ಸೇನಾ ಮುಖ್ಯಸ್ಥ ಮುಖ್ಯಸ್ಥ ಅಸೀಮ್ ಮುನೀರ್ ಸೂಚಿಸಿರುವುದಾಗಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಇಲ್ಯಾಸ್ ಕಾಶ್ಮೀರಿ ಬಹಿರಂಗಪಡಿಸಿದ್ದಾರೆ.
26/11 ಮುಂಬೈ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ತನ್ನ ಬಾಸ್ ಮೌಲಾನಾ ಮಸೂದ್ ಅಜರ್‌ನ ಸಹಭಾಗಿತ್ವವನ್ನು ಖಚಿತಪಡಿಸಿದರು.
ತಿಹಾರ್‌ನಿಂದ (ಐಸಿ-814 ಹೈಜಾಕ್ ನಂತರ) ತಪ್ಪಿಸಿಕೊಂಡ ನಂತರ, ಅಮೀರ್-ಉಲ್-ಮುಜಾಹಿದ್ದೀನ್ ಮೌಲಾನಾ ಮಸೂದ್ ಅಜರ್ ಪಾಕಿಸ್ತಾನಕ್ಕೆ ಬಂದರು ಎಂದು ಹೇಳಿದ್ದಾರೆ.
25 ವರ್ಷಗಳ ಬಳಿಕ ಪಾಕ್ ಸೇನೆ ಹಾಗೂ ಜಿಹಾದಿಗಳು ಒಂದುಗೂಡಿದ್ದೇವೆ ಎನ್ನುವ ಮಾತುಗಳು ವಿಡಿಯೋದಲ್ಲಿದೆ.
ಅದಲ್ಲದೆ ಭಾರತದ ಆಪರೇಷನ್ ಸಿಂಧೂರದಲ್ಲಿ ಇದೇ ಸಂಘನೆಯ ಮಸೈದ್ ಅಜರ್‌ನ ಕುಟುಂಬದ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಆತ ಹೇಳಿದ್ದಾನೆ.