Select Your Language

Notifications

webdunia
webdunia
webdunia
webdunia

ಕಷ್ಟ ಹೇಳಲು ಬಂದ ಪ್ರವಾಹ ಸಂತ್ರಸ್ತೆಗೆ ತನ್ನ ಅಳಲು ತೋಡಿಕೊಂಡ ಸಂಸದೆ ಕಂಗನಾ

Kangana Ranaut

Sampriya

ಶಿಮ್ಲಾ , ಗುರುವಾರ, 18 ಸೆಪ್ಟಂಬರ್ 2025 (20:32 IST)
ಶಿಮ್ಲಾ: ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಅವರು ಪ್ರಸ್ತುತ ಹಿಮಾಚಲ ಪ್ರದೇಶದ ತಮ್ಮ ಲೋಕಸಭಾ ಕ್ಷೇತ್ರವಾದ ಮಂಡಿಗೆ ಪ್ರವಾಹ ಪೀಡಿತ ಜನರನ್ನು ಭೇಟಿ ಮಾಡಲು ಭೇಟಿ ನೀಡಿದರು.

ಈ ವೇಳೆ ‘ವಾಪಸ್‌ ಹೋಗಿ ಕಂಗನಾ, ನೀವು ತಡವಾಗಿ ಬಂದಿದ್ದೀರಿ’ ಎನ್ನುವ ಘೋಷಣೆಗಳನ್ನು ಅಲ್ಲಿನ ಜನ ಕೂಗಿದ್ದಾರೆ.

ಕಂಗನಾ ಬರುತ್ತಿದ್ದಂತೆ ಸ್ಥಳೀಯರು ಕಪ್ಪು ಬಾವುಟ ಹಿಡಿದು, ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿತು. 

ಮಹಿಳೆಯೊಬ್ಬರು ಪ್ರವಾಹದಿಂದಾದ ನಷ್ಟದ ಬಗ್ಗೆ ಹೇಳಿಕೊಳ್ಳುತ್ತಿದ್ದರೆ ಕಂಗನಾ ಮಾತ್ರ, ‘ಇಲ್ಲಿ ನನ್ನದೂ ರೆಸ್ಟೋರೆಂಟ್‌ ಇದೆ, ನಿನ್ನೆ ಒಂದು ದಿನ ಕೇವಲ ₹50 ವ್ಯಾಪಾರವಾಗಿದೆ. ನಾನು ಅಲ್ಲಿರುವ ಉದ್ಯೋಗಿಗಳಿಗೆ ₹15 ಲಕ್ಷ ಪಾವತಿಸುತ್ತೇನೆ. ದಯವಿಟ್ಟು ನನ್ನ ನೋವನ್ನೂ ಅರ್ಥಮಾಡಿಕೊಳ್ಳಿ, ನಾನು ಮನುಷ್ಯಳು’ ತನ್ನ ಸಂಕಷ್ಟವನ್ನು ಅವರ ಜತೆ ವಿವರಿಸಿದ್ದಾರೆ.  

ಕ್ಷೇತ್ರದ ಸಂಸದೆಯಾಗಿ ಕಂಗನಾ ಅವರ ಪ್ರತಿಕ್ರಿಯೆ ಸ್ಥಳೀಯರನ್ನು ಕೆರಳಿಸಿದೆ. ಸದ್ಯ ಕಂಗನಾ ಅವರು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುದೆ.

ಆ.25, 26ರಂದು ಹಿಮಾಚಲ ಪ್ರದೇಶದ ಕುಲು, ಮನಾಲಿ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ ನಾಲ್ಕು ಅಂಗಡಿಗಳು ಕೊಚ್ಚಿ ಆಸ್ತಿ ಹಾನಿಯಾಗಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು, ಬ್ಯಾಂಕಾಂಕ್‌ ಟ್ರಿಪ್ ಪ್ಲಾನ್ ಮಾಡುತ್ತಿರುವ ಪ್ರಯಾಣಿಕರಿಗೆ ಏರ್‌ ಇಂಡಿಯಾದಿಂದ ಗುಡ್‌ನ್ಯೂಸ್‌