Select Your Language

Notifications

webdunia
webdunia
webdunia
webdunia

ಬಾಂಗ್ಲಾದ ನುಸುಳುಕೋರರನ್ನು ಉಳಿಸಲು ರಾಹುಲ್ ಇಷ್ಟೆಲ್ಲ ಸರ್ಕಸ್‌: ಅಮಿತ್ ಶಾ ಟೀಕೆ

ಕೇಂದ್ರ ಸಚಿವ ಅಮಿತ್ ಶಾ

Sampriya

ಬೇಗುಸರಾಯ್ , ಗುರುವಾರ, 18 ಸೆಪ್ಟಂಬರ್ 2025 (18:48 IST)
Photo Credit X
ಬೇಗುಸರಾಯ್ (ಬಿಹಾರ): ಬಿಹಾರದ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಹೆಸರು ಕೇಳಿಬರುತ್ತಿರುವ ಬಾಂಗ್ಲಾದೇಶಿ ನುಸುಳುಕೋರರಿಗೆ ಧ್ವನಿ ಎತ್ತುವ ಉದ್ದೇಶದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತದಾರರ ಅಧಿಕಾರ ಯಾತ್ರೆಯನ್ನು ನಡೆಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಟೀಕಿಸಿದ್ದಾರೆ. 

ಬೇಗುಸರಾಯ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, ರಾಹುಲ್ ಗಾಂಧಿ ಅವರು ಬಾಂಗ್ಲಾದೇಶದಿಂದ ನುಸುಳುಕೋರರ ಬಗ್ಗೆ ಮಾತ್ರ ಕಾಳಜಿ ವಹಿಸಿದ್ದಾರೆ ಹೊರತು ಬಿಹಾರದ ಯುವಕರ ಅಭಿವೃದ್ಧಿಯಲ್ಲಿ ಕಾಳಜಿ ವಹಿಸಿಲ್ಲ ಎಂದರು.

"ರಾಹುಲ್ ಬಾಬಾ ಇಲ್ಲಿಗೆ ಬಂದಿದ್ದರು. ಅವರು ಯಾತ್ರೆ ಹಮ್ಮಿಕೊಂಡಿದ್ದರು. ನುಸುಳುಕೋರರನ್ನು ಉಳಿಸಲು ಅವರು ಹಮ್ಮಿಕೊಂಡಿದ್ದ ಯಾತ್ರೆ. ಈ ನುಸುಳುಕೋರರು ನಮ್ಮ ಮತದಾರರ ಪಟ್ಟಿಯಲ್ಲಿರಬೇಕೇ? ಈ ನುಸುಳುಕೋರರು ಬಡವರಿಗಾಗಿ ನಮ್ಮ ಪಡಿತರವನ್ನು ಪಡೆಯಬೇಕೇ? ಈ ನುಸುಳುಕೋರರಿಗೆ ಉದ್ಯೋಗ ಸಿಗಬೇಕೇ? ಬಡವರಿಗೆ ಐದು ಲಕ್ಷ ರೂಪಾಯಿಗಳ ವೈದ್ಯಕೀಯ ಚಿಕಿತ್ಸೆ ನೀಡಬೇಕೇ? ಬಾಂಗ್ಲಾದೇಶದಿಂದ ನುಸುಳುಕೋರರ ಬಗ್ಗೆ ಕಾಳಜಿ ವಹಿಸುತ್ತಾರೆ, ”ಎಂದು ಗೃಹ ಸಚಿವರು ಹೇಳಿದರು. 

ನುಸುಳುಕೋರರನ್ನು ಮತದಾನ ಪಟ್ಟಿಯಿಂದ ತೆಗೆದ ನಂತರ ಎಸ್‌ಐಆರ್‌ನಲ್ಲಿ ತಮ್ಮ ಮತಬ್ಯಾಂಕ್‌ಗೆ ಧಕ್ಕೆಯಾಗಿರುವುದರಿಂದ ಆರ್‌ಜೆಡಿ ಮತ್ತು ಕಾಂಗ್ರೆಸ್ ಆತಂಕಕ್ಕೆ ಒಳಗಾಗಿವೆ ಎಂದು ಅವರು ಹೇಳಿದರು. 

ಮೋದಿ ನೇತೃತ್ವದಲ್ಲಿ ಬಿಹಾರದಿಂದ ನುಸುಳುಕೋರರನ್ನು ಒಕ್ಕೊರಲಿನಿಂದ ಹೊರಹಾಕುವ ಕೆಲಸ ಮಾಡುತ್ತೇವೆ. ಎಸ್‌ಐಆರ್‌ನಿಂದ ಮತದಾರರ ಪಟ್ಟಿಯನ್ನು ನುಸುಳುಕೋರರ ಮಾಲಿನ್ಯದಿಂದ ಮುಕ್ತಗೊಳಿಸಲು ಸಂಪೂರ್ಣ ಪರಿಷ್ಕರಣೆಯಾಗಿದೆ. ನುಸುಳುಕೋರರ ಮತಗಳನ್ನು ಕಡಿತಗೊಳಿಸಲಾಗಿದೆ. ಈ ನುಸುಳುಕೋರರು ಲಾಲು ಮತ್ತು ರಾಹುಲ್ ಅವರ ಮತಬ್ಯಾಂಕ್ ಎಂಬುದು ನಮಗೆಲ್ಲರಿಗೂ ತಿಳಿದಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರವನ್ನು ಬೆದರಿಸಲು, ಬ್ಲ್ಯಾಕ್‌ಮೇಲ್‌ ಮಾಡೋಕೆ ಬರಬೇಡಿ ಎಂದು ಡಿಕೆಶಿ ಎಚ್ಚರಿಸಿದ್ದು ಯಾರಿಗೆ ಗೊತ್ತಾ