ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ ಓವೈಸಿ

ಭಾನುವಾರ, 16 ಫೆಬ್ರವರಿ 2020 (10:45 IST)
ಕಲಬುರಗಿ : ನಿಮಗೆ ಧೈರ್ಯವಿದ್ದರೆ ನನ್ನನ್ನು ಜೈಲಿಗೆ ಕಳುಹಿಸಿ ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.


ಕಲಬುರಗಿಯಲ್ಲಿ ನಡೆದ ಕಾರ್ಯಕ್ರವೊಂದರಲ್ಲಿ ಮಾತನಾಡಿದ ಅವರು, ಪೌರತ್ವ ಜಾರಿ ಮಾಡುವ ಮೂಲಕ ಮುಸ್ಲಿಂರ ಮೇಲೆ ಷಡ್ಯಂತ ನಡೆಸಲಾಗುತ್ತಿದೆ. ನಾವು ಜೀವಂತವಿರಬೇಕೆಂದರೆ ಸಂಘರ್ಷ ಅನಿವಾರ್ಯ. ಮೋದಿ, ಶಾ, ಆರ್ ಎಸ್ ಎಸ್ ಗೆ ಹೆದರುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.


ಹಾಗೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಸ್ಲಿಂರನ್ನು ಹಾಳು ಮಾಡಿದ್ದೆ ಕಾಂಗ್ರೆಸ್ ಪಕ್ಷ, ತನ್ನ ಮತ ಬ್ಯಾಂಕ್ ಗಾಗಿ ನಮ್ಮನ್ನು ಬಳಸಿಕೊಂಡು ಬಿಸಾಡಿದ್ದು, ಈಗ ಏನೂ ಮಾಡಲಾರದ ಅಸಹಾಯಕತೆಯಲ್ಲಿದೆ ಎಂದು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೆಹಲಿಯ ಸಿಎಂ ಆಗಿ ಇಂದು ಅರವಿಂದ್ ಕ್ರೇಜಿವಾಲ್ ಪ್ರಮಾಣವಚನ ಸ್ವೀಕಾರ