Webdunia - Bharat's app for daily news and videos

Install App

Operation Sindoor: ಪಾಕಿಸ್ತಾನದ ಮಿಲಿಟರಿ ಪೋಸ್ಟ್‌, ಡ್ರೋನ್ ಲಾಂಚ್‌ಪ್ಯಾಡ್‌ ಉಡೀಸ್‌

Sampriya
ಶನಿವಾರ, 10 ಮೇ 2025 (11:29 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ತಾರಕಕ್ಕೆ ಏರಿದೆ. ಇದರ ಬೆನ್ನಲ್ಲೇ ಪಾಕ್‌ ಸೇನೆಯು ಶುಕ್ರವಾರ ನಡೆಸಿದ ಡ್ರೋನ್‌ ಹಾಗೂ ಕ್ಷಿಪಣಿ ದಾಳಿಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.

ಡ್ರೋನ್‌ ದಾಳಿಗಳನ್ನು ನಡೆಸಲು ಪಾಕಿಸ್ತಾನ ಬಳಸುತ್ತಿದ್ದ ಮಿಲಿಟರಿ ಪೋಸ್ಟ್‌ಗಳು ಮತ್ತು ಲಾಂಚ್‌ಪ್ಯಾಡ್‌ಗಳನ್ನು ಭಾರತೀಯ ಸೇನಾಪಡೆಗಳು ಧ್ವಂಸಗೊಳಿಸಿ, ಪಾಕಿಸ್ತಾನಕ್ಕೆ ದೊಡ್ಡ ಆಘಾತ ನೀಡಿದೆ. ‌ಆಪರೇಷನ್‌ ಸಿಂಧೂರ ಕಾರ್ಯಾಚರಣೆಗೆ ಪಾಕ್‌ ಪತರಗುಟ್ಟಿದೆ.

ಪಾಕಿಸ್ತಾನವು ಟ್ಯೂಬ್ ಲಾಂಚ್‌ಪ್ಯಾಡ್‌ ಅನ್ನು ಡ್ರೋನ್‌ಗಳನ್ನು ಉಡಾಯಿಸಲು ಬಳಸುತ್ತಿತ್ತು. ಜಮ್ಮು ಬಳಿ ನೆಲೆಗೊಂಡಿರುವ ಭಾರತೀಯ ಸೇನಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು ನೀಡಿದೆ.

‌ಪಾಕಿಸ್ತಾನ ಸೇನೆಯು ಶುಕ್ರವಾರ ರಾತ್ರಿಯೂ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆ, ಪಂಜಾಬ್‌ನ ಫಿರೋಜ್‌ಪುರ, ರಾಜಸ್ಥಾನದ ಪೋಖರಣ್‌ ಮತ್ತಿತರ ಕಡೆಗಳಲ್ಲಿ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಇವುಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಬ್ಲ್ಯಾಕ್ಔಟ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಭಾರತ ಏಟಿಗೆ ಪಾಕ್‌ ತತ್ತರ - ಇಸ್ಲಾಮಾಬಾದ್‌ನಲ್ಲಿ ಪೆಟ್ರೋಲ್ ಪಂಪ್‌ಗಳು ಬಂದ್‌

Operation Sindoor, ವಿಶ್ವ ಭೂಪಟದಲ್ಲೇ ಪಾಕಿಗಳು ಇಲ್ಲದಂತೆ ಆಗಬೇಕು: ಕಂಗನಾ ರನೌತ್‌

Karnataka Weather: ರಾಜ್ಯದ ಈ ಪ್ರದೇಶದಲ್ಲಿ ಇನ್ನೂ ಒಂದು ವಾರ ವ್ಯಾಪಕ ಮಳೆ

Operation Sindoor: ಊಹಿಸಲಾಗದ ರೀತಿ ಪಾಕಿಸ್ತಾನ ಮೇಲೆ ದಾಳಿ ಮಾಡಿದ ಭಾರತ

India Pakistan:ರಾತ್ರಿಯಾಗುತ್ತಿದ್ದಂತೇ ಪಾಕಿಸ್ತಾನದಿಂದ ಮತ್ತೆ ದಾಳಿ ಶುರು, 3 ರಾಜ್ಯ ಟಾರ್ಗೆಟ್

ಮುಂದಿನ ಸುದ್ದಿ
Show comments