Webdunia - Bharat's app for daily news and videos

Install App

Operation Sindoor: ಭಾರತ ಏಟಿಗೆ ಪಾಕ್‌ ತತ್ತರ - ಇಸ್ಲಾಮಾಬಾದ್‌ನಲ್ಲಿ ಪೆಟ್ರೋಲ್ ಪಂಪ್‌ಗಳು ಬಂದ್‌

Sampriya
ಶನಿವಾರ, 10 ಮೇ 2025 (11:19 IST)
Photo Courtesy X
ಇಸ್ಲಾಮಾಬಾದ್‌: ಭಾರತದ ದಾಳಿಯಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದೆ. ಆರ್ಥಿಕ ದಿವಾಳಿಯತ್ತ ಸಾಗಿರುವ ದೇಶದಲ್ಲಿ ಈಗ ಇಂಧನ ಕೊರತೆ ಎದುರಾಗಿದೆ. ಮುಂದಿನ 48 ಗಂಟೆಗಳ ಕಾಲ ಎಲ್ಲಾ ಪೆಟ್ರೋಲ್‌ ಪಂಪ್‌ಗಳನ್ನು ಸಂಪೂರ್ಣವಾಗಿ ಬಂದ್‌ ಇರಲಿದೆ.

ಅಪರೇಷನ್‌ ಸಿಂಧೂರ ಎಫೆಕ್ಟ್‌ ಪಾಕಿಸ್ತಾನದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತ ನಡೆಸಿದ ವಾಯುದಾಳಿಗೆ ಪತರುಗುಟ್ಟಿಹೋಗಿರುವ ಪಾಕ್‌ ತಾನು ನಂಬಿದ್ದ ಶಕ್ತಿಶಾಲಿ ಅಸ್ತ್ರಗಳಿಂದಲೇ ಶತಕೋಟಿ ನಷ್ಟ ಅನುಭವಿಸಿದೆ. ಇದರಿಂದ ಪಾಕಿಸ್ತಾನದ ಆರ್ಥಿಕ ಸ್ಥಿತಿ ಈಗಾಗಲೇ ಅಧೋಗತಿ ತಲುಪಿದ್ದು, ದಿವಾಳಿಯ ಆಗುವ ಹಂತಕ್ಕೆ ತಲುಪಿದೆ.

ಇಸ್ಲಾಮಾಬಾದ್‌ ಆಡಳಿತ ಹೊರಡಿಸಿದ ಅಧಿಕೃತ ಸೂಚನೆಯಲ್ಲಿ ನಿಖರ ಕಾರಣ ಉಲ್ಲೇಖಿಸದೇ, ಎಲ್ಲಾ ಪೆಟ್ರೋಲ್‌ ಪಂಪ್‌ಗಳನ್ನು ಕೂಡಲೇ ಮುಚ್ಚಬೇಕೆಂದು ಕಟ್ಟಾಜ್ಞೆ ಮಾಡಿದೆ. ಈ ಆದೇಶ ಶನಿವಾರ ಮುಂಜಾನೆ ಹೊರಡಿಸಿವೆ.

ಹೀಗಾಗಿ ಮುಂದಿನ  48ಗಂಟೆವರೆಗೆ ಇಸ್ಲಾಮಾಬಾದ್‌ನಲ್ಲಿ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಿಗೆ ಇಂಧನ ಲಭ್ಯವಾಗದೇ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಜೊತೆಗೆ ಈ ಬೆಳವಣಿಗೆ ಪಾಕ್‌ ಸರ್ಕಾರಕ್ಕೆ ಭಾರೀ ನಷ್ಟವಾಗಲಿದೆ.

ಭಾರತದ ದಾಳಿಯಿಂದ ತನಗೆ ಭಾರೀ ನಷ್ಟವಾವುತ್ತಿದ್ದು, ಸಾಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬೇಡಿಕೆ ಇಟ್ಟಿದೆ. ಪಾಕಿಸ್ತಾನದ ಆರ್ಥಿಕ ಇಲಾಖೆಯ ಆರ್ಥಿಕ ವ್ಯವಹಾರಗಳ ವಿಭಾಗದ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಸಾಲಕ್ಕಾಗಿ ಅಧಿಕೃತ ಮನವಿ ಮಾಡಿಕೊಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಊಹಿಸಲಾಗದ ರೀತಿ ಪಾಕಿಸ್ತಾನ ಮೇಲೆ ದಾಳಿ ಮಾಡಿದ ಭಾರತ

India Pakistan:ರಾತ್ರಿಯಾಗುತ್ತಿದ್ದಂತೇ ಪಾಕಿಸ್ತಾನದಿಂದ ಮತ್ತೆ ದಾಳಿ ಶುರು, 3 ರಾಜ್ಯ ಟಾರ್ಗೆಟ್

Operation Sindoor Effect:ಈ ವಿಷಯ ಗೊತ್ತಿಲ್ಲದೆ ಮಾಮೂಲಿ ಟೈಮ್‌ಗೆ ವಿಮಾನ ಹತ್ತಲು ಹೋದ್ರೆ ಮಿಸ್ ಆಗುವುದು ಗ್ಯಾರಂಟಿ

ಪಾಕ್‌, ಭಾರತ ನಡುವೆ ಹೆಚ್ಚಿದ ಉದ್ವಿಗ್ನತೆ: ಚೀನಾಗೂ ತಟ್ಟಿದ ಬಿಸಿ, ನಾಗರಿಕರಿಗೆ ಸಂದೇಶ ರವಾನೆ

ಸರ್ಕಾರದ ಈ ಕ್ರಮವು ದೇಶದ ಸ್ವಾಭಿಮಾನವನ್ನು ಹೆಚ್ಚಿಸಿದೆ: ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ RSS

ಮುಂದಿನ ಸುದ್ದಿ
Show comments