ನವದೆಹಲಿ: ಪಾಕಿಸ್ತಾನ ಹಾಗೂ ಭಾರತ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದ ಹಾಗೇ ವಿಶ್ವ ಭೂಪಟದಲ್ಲೇ ಪಾಕಿಗಳು ಇಲ್ಲದ ಹಾಗೇ ಆಳಿಸಿಹಾಕಬೇಕೆಂದು ಬಾಲಿವುಡ್ ನಟಿ, ಮಂಡಿ ಸಂಸದೆ ಕಂಗನಾ ರನೌತ್ ಆಕ್ರೋಶ ಹೊರಹಾಕಿದ್ದಾರೆ.
ಗಡಿಯಾಚೆಗಿನ ಉದ್ವಿಗ್ನತೆಗಳು ಈಚೆಗೆ ಉಲ್ಭಣಗೊಂಡ ಬಳಿಕ ಬಿಜೆಪಿ ನಾಯಕಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಬಲವಾದ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ.
ಪಾಕಿಸ್ತಾನ "ಭಯೋತ್ಪಾದಕರಿಂದ ತುಂಬಿರುವ ಅಸಹ್ಯ ರಾಷ್ಟ್ರ" ಎಂದು ಕರೆದ ಅವರು ಅದನ್ನು "ವಿಶ್ವ ಭೂಪಟದಿಂದ ಅಳಿಸಿಹಾಕಬೇಕು" ಎಂದು ಘೋಷಿಸಿದರು.
ಮೇ 8 ರಂದು ಪಾಕಿಸ್ತಾನವು ಭಾರತದ ಅನೇಕ ಭಾಗಗಳಲ್ಲಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿದ ನಂತರ ಕಂಗನಾ ಅವರ ಹೇಳಿಕೆಗಳು ಬಂದಿವೆ.
ಜಮ್ಮು ಮತ್ತು ಕಾಶ್ಮೀರದ ಜಮ್ಮು, ಸಾಂಬಾ, ಸತ್ವರಿ ಮತ್ತು ಉಧಮ್‌ಪುರ, ಪಂಜಾಬ್‌ನ ಅಮೃತಸರ ಮತ್ತು ಜಲಂಧರ್ ಮತ್ತು ರಾಜಸ್ಥಾನದ ಬಿಕಾನೇರ್ ಮತ್ತು ಜೈಸಲ್ಮೇರ್ ಪ್ರದೇಶಗಳನ್ನು ಡ್ರೋನ್ ದಾಳಿಗಳು ಗುರಿಯಾಗಿಸಿಕೊಂಡಿವೆ.