Select Your Language

Notifications

webdunia
webdunia
webdunia
webdunia

Operation Mahadev: ಪಹಲ್ಗಾಮ್ ಕುಕೃತ್ಯ ನಡೆಸಿದ ಮೂವರು ಶಂಕಿತ ಉಗ್ರರು ಮಟಾಷ್

Indian Army

Krishnaveni K

ನವದೆಹಲಿ , ಸೋಮವಾರ, 28 ಜುಲೈ 2025 (15:03 IST)
ನವದೆಹಲಿ: ಶ್ರೀನಗರದ ಪಹಲ್ಗಾಮ್ ನಲ್ಲಿ ಏಪ್ರಿಲ್ ನಲ್ಲಿ ನಡೆದಿದ್ದ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಉಗ್ರರನ್ನು ಸೇನೆ ಕೊಂದು ಹಾಕಿದೆ.

ಶ್ರೀನಗರದ ಲಿಡ್ಡಾಸ್ ಪ್ರದೇಶದಲ್ಲಿ ಭಾರತೀಯ ಸೇನೆ ಆಪರೇಷನ್ ಮಹಾದೇವ್ ಹೆಸರಿನಲ್ಲಿ ಕಾರ್ಯಾಚಾರಣೆ ನಡೆಸಿದೆ. ಈ ವೇಳೆ ಮೂವರು ವಿದೇಶೀ ಉಗ್ರರನ್ನು ಫಿನಿಶ್ ಮಾಡಲಾಗಿದೆ.  ಇವರೆಲ್ಲರೂ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದವರು ಎಂದು ಸೇನಾ ಮೂಲಗಳು ಹೇಳಿವೆ.

ಸೇನೆ ಹತ್ಯೆ ಮಾಡಿದ ಭಯೋತ್ಪಾದಕರೆಲ್ಲರಿಗೂ ಟಿಆರ್ ಎಫ್ ಉಗ್ರ ಸಂಘಟನೆಯ ನಂಟು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಪಹಲ್ಗಾಮ್ ದಾಳಿಯ ಹೊಣೆಯನ್ನು ಟಿಆರ್ ಎಫ್ ಸಂಘಟನೆ ಹೊತ್ತುಕೊಂಡಿತ್ತು. ಇದೀಗ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಕೊಂದು ಹಾಕಿದೆ.

ಲಿಡ್ಡಾಸ್ ನ ಬೆಟ್ಟ ಪ್ರದೇಶದಲ್ಲಿ ಬಹಳ ಸಮಯದಿಂದಲೂ ಉಗ್ರರು ಬೀಡುಬಿಟ್ಟಿದ್ದರು ಎನ್ನಲಾಗಿತ್ತು. ಇದೀಗ ಖಚಿತ ಮಾಹಿತಿ ಹಿನ್ನಲೆಯಲ್ಲಿ ಸೇನೆ ದಾಳಿ ನಡೆಸಿದೆ. ಇನ್ನಷ್ಟು ಉಗ್ರರು ಇಲ್ಲಿರುವ ಶಂಕೆಯಿದ್ದು ಸೇನೆ ಹುಡುಕಾಟ ಮುಂದುವರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ