ಮುಂಬೈ: ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲಕಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಪರೇಷನ್ ಸಿಂಧೂರ್ ಬೆನ್ನಲ್ಲೇ
ಭಾರತೀಯ ಸೇನಾ ವಿಧವೆಯರ ಕಲ್ಯಾಣ ನಿಧಿಗೆ ಭಾರಿ ದೇಣಿಗೆ ಪ್ರಕಟಿಸಿದ್ದಾರೆ.
ಪ್ರೀತಿ ಜಿಂಟಾ ಅವರು ಪಂಜಾಬ್ ಕಿಂಗ್ಸ್‌ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ಭಾರತೀಯ ಸೇನೆಯ ಸೌತ್ ವೆಸ್ಟರ್ನ್ ಕಮಾಂಡ್, ಸೇನಾ ಪತ್ನಿಯರ ಕಲ್ಯಾಣ ಸಂಘಕ್ಕೆ ₹1.10 ಕೋಟಿ ದೇಣಿಗೆ ನೀಡಿದ್ದು, ಅವರ ಕಾರ್ಯಕ್ಕೆ ಎಲ್ಲರೂ ಶಹಭಾಷ್ ಹೇಳಿದ್ದಾರೆ.
ಈಚೆಗೆ ಜೈಪುರದಲ್ಲಿ ನಡೆದ ದೇಣಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಸೌತ್ ವೆಸ್ಟರ್ನ್ ಕಮಾಂಡ್‌ನ ಸೇನಾ ಪತ್ನಿಯರ ಕಲ್ಯಾಣ ಸಂಘದ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರೀತಿ ಜಿಂಟಾ ಒಂದು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡುವ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ದೇಶವನ್ನು ಕಾಯುವ ಸಶಸ್ತ್ರ ಪಡೆಗಳ ಕುಟುಂಬಗಳ ಬೆಂಬಲಕ್ಕೆ ನಿಲ್ಲುವುದು ನಮ್ಮ ಜವಾಬ್ದಾರಿ. ನಮ್ಮ ಸೈನಿಕರ ತ್ಯಾಗವನ್ನು ನಾವು ಮೆಚ್ಚ ಬೇಕು. ಆದರೆ ಅವರು ಮುಂದುವರಿಯುತ್ತಿರುವಾಗ ಅವರ ಕುಟುಂಬಗಳೊಂದಿಗೆ ನಿಂತು ಅವರನ್ನು ಬೆಂಬಲಿಸೋಣ. ನಾನು ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ ಈ ದೇಣಿಗೆ ನೀಡುತ್ತಿದ್ದೇನೆ ಎಂದು ಪ್ರೀತಿ ಹೇಳಿದರು.
ಐಪಿಎಲ್‌ನಲ್ಲಿ ಪಂಜಾಬ್ ತಂಡವು ಈತನಕ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡವು ಪ್ಲೇಆಫ್ ಪ್ರವೇಶಿಸಿದೆ.