Select Your Language

Notifications

webdunia
webdunia
webdunia
webdunia

ಪಾಕ್ ಮೇಲೆ ಎಲ್ಲಿ ಯುದ್ಧ ಮಾಡಿದ್ರು ಎಂದ ಕೈ ಶಾಸಕ: ನೀವೇ ನಿಜವಾದ ದುಷ್ಮನ್ ಗಳು ಎಂದ ನೆಟ್ಟಿಗರು

Kottur Manjunath

Krishnaveni K

ಬೆಂಗಳೂರು , ಶುಕ್ರವಾರ, 16 ಮೇ 2025 (11:48 IST)
ಬೆಂಗಳೂರು: ಪಾಕಿಸ್ತಾನ ಮೇಲೆ ಎಲ್ಲಿ ಯುದ್ಧ ಮಾಡಿದ್ರು? ಸಮ್ನೇ ನಾಲ್ಕು ಫ್ಲೈಟ್ ಹಾರಿಸಿದ್ರೆ ಸಾಕಾ ಎಂದು ಪ್ರಶ್ನೆ ಮಾಡಿರುವ ಕೈ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ.
 

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ನಡೆಸಿ ಉಗ್ರರನ್ನು ಸದೆಬಡಿತ್ತು. ಪಾಕಿಸ್ತಾನ ನೆಲದಲ್ಲಿ ಅಡಗಿಕೊಂಡಿದ್ದ ಉಗ್ರರ ಮಾರಣ ಹೋಮ ನಡೆಸಿದ್ದಕ್ಕೆ ಇಡೀ ದೇಶವೇ ಸೈನ್ಯವನ್ನು ಕೊಂಡಾಡಿತ್ತು. ಆದರೆ ಕೆಲವು ರಾಜಕೀಯ ನಾಯಕರು ಇದರಲ್ಲೂ ಹುಳುಕು ಹುಡುಕುವ ಕೆಲಸ ಮಾಡುತ್ತಿದ್ದಾರೆ.

ಕಾಂಗ್ರೆಸ್ ಶಾಸಕ ಮಂಜುನಾಥ್ ಕೂಡಾ ಇಂತಹದ್ದೇ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತೀಯ ಸೇನೆಗೇ ಅವಮಾನ ಮಾಡುವಂತಹ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ನಿಜವಾದ ದುಷ್ಮನ್ ಗಳು ನಿಮ್ಮಂಥವರೇ ಎಂದಿದ್ದಾರೆ. ನಿಮಗೆಲ್ಲಾ ಮತಿಭ್ರಮಣೆ ಆಗಿದೆಯಾ? ನಮ್ಮ ಸೈನಿಕರ ಶಕ್ತಿಯನ್ನೇ ಅನುಮಾನಿಸುವ ನಿಮಗೆಲ್ಲಾ ಏನು ಹೇಳಬೇಕು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Puneeth Kerehalli: ನಿನ್ನನ್ನೂ ಮುಗಿಸುತ್ತೇವೆ ಎಂದು ಪುನೀತ್ ಕೆರೆಹಳ್ಳಿಗೆ ಜೀವ ಬೆದರಿಕೆ