Select Your Language

Notifications

webdunia
webdunia
webdunia
webdunia

ಪಾಕಿಸ್ತಾನದೊಂದಿಗೆ ಯುದ್ಧ ಬೇಡ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ಹೇಳೋದೇ ಬೇರೆ

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 16 ಮೇ 2025 (15:05 IST)
ಬೆಂಗಳೂರು: ಪಹಲ್ಗಾಮ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ಜೊತೆ ಯುದ್ಧ ಬೇಡ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಕದನ ವಿರಾಮದ ಬಗ್ಗೆ ಸಿಎಂ ಇಂದು ಕೇಂದ್ರವನ್ನು ಟೀಕಿಸಿದ್ದಾರೆ.

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕಾ ಸಾರ್ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಯುದ್ಧ ಬೇಡ ಎಂದು ಪಾಕ್ ನಲ್ಲೂ ಸಿದ್ದರಾಮಯ್ಯ ಫೇಮಸ್ ಆಗಿದ್ದರು. ಆದರೆ ಇಂದು ಅವರ ವರಸೆಯೇ ಬದಲಾಗಿದೆ.

ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಒಳ್ಳೆಯ ಅವಕಾಶವಿತ್ತು. ನಮ್ಮ ಮೇಲೆ ಸದಾ ದಾಳಿ ಮಾಡುವ ಉಗ್ರರನ್ನು ಮಟ್ಟ ಹಾಕಲು ಅವಕಾಶವಿತ್ತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅದನ್ನು ಹಾಳು ಮಾಡಿದರು. ಟ್ರಂಪ್ ಮಾತು ಕೇಳಿಕೊಂಡು ಕದನ ವಿರಾಮ ಮಾಡಿದರು ಎಂದಿದ್ದಾರೆ.

ಹಾಗಿದ್ದರೆ ಅಂದು ಯುದ್ಧ ಬೇಡ ಎಂದು ಹೇಳಿದ್ದಿರಲ್ಲಾ ಎಂದು ಕೇಳಿದಾಗ ‘ಆಗ ನಾನು ನೀವ್ಯಾರೋ ಕೇಳಿದ್ದರಲ್ಲ ಅದಕ್ಕೆ ಯುದ್ಧ ಬೇಡ, ಆದರೆ ಅದರ ಹೊರತು ಬೇರೆ ಏನಾದರೂ ಮಾಡಬಹುದು ಎಂದಿದ್ದೆ. ಆದರೆ ಅನಿವಾರ್ಯವಾದರೆ ನಮ್ಮ ದೇಶ ರಕ್ಷಣೆಗೆ ಯುದ್ಧ ಮಾಡಲೇಬೇಕಾಗುತ್ತದೆ ಎಂದಿದ್ದೆ. ಆದರೆ ಅನಿವಾರ್ಯವಾದರೆ ಯುದ್ಧ ಮಾಡಲಿ ಎಂದಿದ್ದನ್ನು ಬಿಟ್ಟು ಬೇಡ ಎಂದಿದ್ದನ್ನೇ ಪ್ರಚಾರ ಮಾಡಿದರು’ ಎಂದು ಸಿಎಂ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಸಿಂಧೂರ್ ಬಗ್ಗೆ ಅಪಪ್ರಚಾರ ಮಾಡಲು ಕಾಂಗ್ರೆಸ್ ನಾಯಕರಿಗೆ ಟಾಸ್ಕ್