Select Your Language

Notifications

webdunia
webdunia
webdunia
webdunia

Rahul Gandhi: ಪಾಕಿಸ್ತಾನದ ಮುಂದೆ ನಮ್ಮ ಎಷ್ಟು ವಿಮಾನ ಕಳೆದುಕೊಂಡಿತು ಲೆಕ್ಕ ಕೊಡಿ

Rahul Gandhi

Krishnaveni K

ನವದೆಹಲಿ , ಸೋಮವಾರ, 19 ಮೇ 2025 (16:15 IST)
ನವದೆಹಲಿ: ಪಾಕಿಸ್ತಾನದ ಜೊತೆಗೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಎಷ್ಟು ಯುದ್ಧ ವಿಮಾನಗಳನ್ನು ಕಳೆದುಕೊಂಡಿವೆ ಲೆಕ್ಕ ಕೊಡಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮೌನ ಶಾಪ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದುವರೆಗೆ ಕಾಂಗ್ರೆಸ್ ನ ಅನೇಕ ನಾಯಕರು ಭಾರತೀಯ ಸೇನೆಯ ದಾಳಿಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿದ್ದರು. ಇದೀಗ ಸ್ವತಃ ರಾಹುಲ್ ಗಾಂಧಿ ಸತ್ಯ ತಿಳಿಸಿ, ನಾವು ಎಷ್ಟು ಯುದ್ಧ ವಿಮಾನ ಕಳೆದುಕೊಂಡೆವು ಎಂಬುದು ಬಯಲಾಗಲಿ ಎಂದಿದ್ದಾರೆ.

ಆಪರೇಷನ್ ಸಿಂಧೂರ್ ನಡೆಸುವ ಮೊದಲು ಸಚಿವ ಜೈಶಂಕರ್ ಪಾಕಿಸ್ತಾನಕ್ಕೆ ಮಾಹಿತಿ ನೀಡಿ ದೇಶದ ಭದ್ರತೆಯೊಂದಿಗೆ ದೊಡ್ಡ ರಾಜಿ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ವಿದೇಶಾಂಗ ಸಚಿವ ಜೈಶಂಕರ್ ಮೌನವೇ ಹೇಳುವಂತೆ, ಅದು ಶಾಪಗ್ರಸ್ತ. ಹೀಗಾಗಿ ನಾನು ಮತ್ತೊಮ್ಮೆ ಕೇಳುತ್ತಿದ್ದೇನೆ, ಪಾಕಿಸ್ತಾನಕ್ಕೆ ಮೊದಲೇ ಮಾಹಿತಿ ಹೋಗಿದ್ದರಿಂದ ನಾವು ಎಷ್ಟು ವಿಮಾನಗಳನ್ನು ಕಳೆದುಕೊಂಡೆವು. ಇದು ಕೇವಲ ಭದ್ರತಾ ಲೋಪವಲ್ಲ, ಅಪರಾಧ. ಇಡೀ ದೇಶಕ್ಕೆ ಸತ್ಯ ತಿಳಿಸಬೇಕು’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

India Pakistan: ತಿನ್ನೋದು ಭಾರತದ ಅನ್ನ, ಸೇವೆ ಮಾತ್ರ ಪಾಕಿಸ್ತಾನಕ್ಕೆ: ಯುಪಿ ವ್ಯಕ್ತಿ ಅರೆಸ್ಟ್