ನವದೆಹಲಿ: ಯೂ ಟ್ಯೂಬರ್ ಬಳಿಕ ನಮ್ಮ ದೇಶದಲ್ಲೇ ಇದ್ದುಕೊಂಡು ನಮ್ಮ ದೇಶಕ್ಕೇ ದ್ರೋಹವೆಸಗುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ತಿನ್ನೋದು ಭಾರತದ ಅನ್ನ, ಮಾಡೋದು ಪರಮ ಪಾಪಿ ಪಾಕಿಸ್ತಾನದ ಸೇವೆ.
ದುಡ್ಡೊಂದು ಇದ್ದರೆ ಏನು ಬೇಕಾದರೂ ಮಾಡುವ ಕಲಿಗಾಲ ಇದು. ಉತ್ತರ ಪ್ರದೇಶದ ರಾಮ್ ಪುರದಲ್ಲಿ ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಉದ್ಯಮಿಯನ್ನು ಅರೆಸ್ಟ್ ಮಾಡಲಾಗಿದೆ. ಈತನನ್ನು ಶಹಜಾಝ್ ಎಂದು ಗುರುತಿಸಲಾಗಿದೆ.
ಗಡಿಯಲ್ಲಿ ಅಕ್ರಮ ನುಸುಳುಕೋರರಿಗೆ ಸಹಾಯ ಮಾಡುವುದು, ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡುವುದು ಕೆಲಸ ಮಾಡುತ್ತಿದ್ದ. ಅಲ್ಲದೆ ದೇಶದ ಭದ್ರತೆಗೆ ಸಂಬಂಧಪಟ್ಟ ಸೂಕ್ಷ್ಮ ವಿಚಾರಗಳನ್ನು ಪಾಕಿಸ್ತಾನಕ್ಕೆ ಒದಗಿಸುತ್ತಿದ್ದ. ಅಲ್ಲದೆ, ಸಾಕಷ್ಟು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ ಎನ್ನುವುದು ತಿಳಿದುಬಂದಿದೆ.
ಭಾರತದಲ್ಲಿರುವ ಐಎಸ್ಐ ಏಜೆಂಟರುಗಳಿಗೆ ಭಾರತೀಯ ಸಿಮ್ ಕಾರ್ಡ್, ಹಣ ಒದಗಿಸುತ್ತಿದ್ದ. ರಾಮ್ ಪುರ ಮತ್ತು ಉತ್ತರ ಪ್ರದೇಶದಿಂದ ಹಲವರನ್ನು ಈತ ಪಾಕಿಸ್ತಾನಕ್ಕೆ ಕಳುಹಿಸಲು ನೆರವಾಗಿದ್ದ. ಇವರ ವೀಸಾ ವ್ಯವಸ್ಥೆಯನ್ನೆಲ್ಲಾ ನೇರವಾಗಿ ಐಎಸ್ಐಯೇ ನೋಡಿಕೊಳ್ಳುತ್ತಿತ್ತು ಎಂದು ಈಗ ಬಯಲಾಗಿದೆ.