Publish Date: Tue, 11 Aug 2020 (11:06 IST)
Updated Date: Tue, 11 Aug 2020 (11:08 IST)
ಬೆಂಗಳೂರು: ಕೊರೋನಾದಿಂದಾಗಿ ಈ ವರ್ಷದ ಶಾಲೆ, ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಈ ಬಗ್ಗೆ ಅನೇಕ ಊಹಾಪೋಹಗಳು ಬರುತ್ತಲೇ ಇವೆ.
ಇದೀಗ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಶಾಲೆ ಆರಂಭಿಸುವ ಕುರಿತು ನಿರ್ದೇಶನ ನೀಡಿದ್ದು, ಆಗಸ್ಟ್ 31 ರವರೆಗೂ ಶಾಲೆ, ಕಾಲೇಜುಗಳನ್ನು ತೆರೆಯದೇ ಇರಲು ಆದೇಶಿಸಿದೆ.
ಕೇಂದ್ರದ ಮುಂದಿನ ಸೂಚನೆ ಆಧಾರದಲ್ಲಿ ಸೆಪ್ಟೆಂಬರ್ ಬಳಿಕ ಶಾಲೆ ಆರಂಭವಾಗಬಹುದು ಎನ್ನಲಾಗಿದೆ. ಕೊರೋನಾ ಪ್ರಕರಣಗಳು ಹದಕ್ಕೆ ಬಂದ ಮೇಲೆಯೇ ಶಾಲೆ ಆರಂಭವಾಗುವುದು ಖಚಿತ.