ಹೈದರಾಬಾದ್ : ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದ ಟಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಅವರಿಗೆ ಕೊರೊನಾ ಇದೆ ಎಂಬ ವದಂತಿ ಹಬ್ಬಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಆರ್ ಜಿವಿ, ನಾನು ಫಿಟ್ ಆಗಿದ್ದೀನಿ. ಜ್ವರವೂ ಇಲ್ಲ ಕೊರೊನಾನೂ ಇಲ್ಲ ಎಂದು ಟ್ವೀಟರ್ ನಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ನಾನು ಸತತವಾಗಿ ಕೆಲಸ ಮಾಡುತ್ತಿದ್ದೇನೆ, ಸ್ಪೆಷಲ್ ಸಿನಿಮಾಗಳನ್ನು ಸಹ ತೆಗೆಯುತ್ತಿದ್ದೇನೆ. ನಿರಂತರವಾಗಿ ವರ್ಕೌಟ್ ಕೂಡ ಮಾಡುತ್ತಿದ್ದೇನೆ. ನನಗೆ ಅನಾರೋಗ್ಯವಿದೆ ಎಂದು ಸಂತಸ ಪಡುತ್ತಿರುವವರಿಗೆ ನಿರಾಸೆ ಮಾಡಿದ್ದಕ್ಕೆ ನನ್ನನ್ನು ಕ್ಷಮಿಸಿ ಬಿಡಿ ಎಂದು ತಿಳಿಸಿದ್ದಾರೆ.