Publish Date: Fri, 20 Mar 2020 (09:30 IST)
Updated Date: Fri, 20 Mar 2020 (09:31 IST)
ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಗಲ್ಲಿಗೇರಿದ ನಾಲ್ವರು ಅಪರಾಧಿಗಳ ಪೈಕಿ ಮುಕೇಶ್ ತನ್ನ ದೇಹದಾನ ಮಾಡಲು ಬಯಸಿದ್ದ ಅಂಶ ಬೆಳಕಿಗೆ ಬಂದಿದೆ.
ಇಂದು ಬೆಳಿಗ್ಗೆ 5.30 ಕ್ಕೆ ತಿಹಾರ್ ಜೈಲಿನಲ್ಲಿ ಈ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಆ ಮೂಲಕ ನಿರ್ಭಯಾಗೆ ತಕ್ಕ ನ್ಯಾಯ ದೊರಕಿದಂತಾಗಿದೆ.
ನಿಯಮದ ಪ್ರಕಾರ ಈ ನಾಲ್ವರು ಅಪರಾಧಿಗಳು ಕೊನೆಯ ಆಸೆ ಕೇಳಿದಾಗ ಬಾಯಿಬಿಟ್ಟಿರಲಿಲ್ಲ. ಆದರೆ ಶಿಕ್ಷೆ ಜಾರಿಯಾಗುವ ಮುನ್ನ ವಿಲ್ ಬರೆಯಲು ಅವಕಾಶವಿದೆ. ಅದರಂತೆ ಮುಕೇಶ್ ತನ್ನ ವಿಲ್ ನಲ್ಲಿ ದೇಹದಾನ ಮಾಡಲು ಬಯಸುವುದಾಗಿ ಬರೆದಿದ್ದ. ಇನ್ನೊಬ್ಬ ಅಪರಾಧಿ ವಿನಯ್ ತನ್ನ ಪೈಂಟಿಂಗ್ ನ್ನು ದಾನ ಮಾಡಬೇಕೆಂದು ಬರೆದಿದ್ದ. ಆದರೆ ಉಳಿದಿಬ್ಬರು ಅಪರಾಧಿಗಳು ವಿಲ್ ನಲ್ಲಿ ಏನನ್ನೂ ಬರೆದಿರಲಿಲ್ಲ.