Select Your Language

Notifications

webdunia
webdunia
webdunia
webdunia

ಮೊದಲ ಡೇಟ್ ನಲ್ಲಿ ಮಹಿಳೆಗೆ ಹೀಗಾ ಮಾಡೋದು?!

ಮೊದಲ ಡೇಟ್ ನಲ್ಲಿ ಮಹಿಳೆಗೆ ಹೀಗಾ ಮಾಡೋದು?!
ಮುಂಬೈ , ಮಂಗಳವಾರ, 17 ಮಾರ್ಚ್ 2020 (09:49 IST)
ಮುಂಬೈ: ಮೊದಲ ಬಾರಿಗೆ ಡೇಟಿಂಗ್ ಮಾಡಲು ಬಂದಾಗ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.


29 ವರ್ಷದ ಆರ್ ಡೇಡಿಯಾ ಬಂಧಿತ. ಈತ ಡೇಟಿಂಗ್ ಆಪ್ ಮೂಲಕ ಮಹಿಳೆಯ ಪರಿಚಯ ಮಾಡಿಕೊಂಡಿದ್ದ. ಅದರಂತೆ ಇಬ್ಬರೂ ಮಾತನಾಡಿಕೊಂಡು ಬಾಂದ್ರಾದಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಈ ವೇಳೆ ಇಬ್ಬರೂ ಪಬ್ ಒಂದಕ್ಕೆ ತೆರಳಿದ್ದರು. ಈ ವೇಳೆ ಡೇಡಿಯಾ ಬಿಯರ್ ಸೇವನೆ ಮಾಡಿದ್ದ.

ಇದಾದ ಬಳಿಕ ಆತ ಅಸಭ್ಯವಾಗಿ ವರ್ತಿಸಲು ಆರಂಭಿಸಿ. ಕಾರಿನಲ್ಲಿ ಡ್ರಾಪ್ ಮಾಡುವುದಾಗಿ ಹೇಳಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ. ಇದೀಗ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ನಿವೃತ್ತ ನ್ಯಾ. ರಂಜನ್ ಗೋಗೊಯ್ ನೇಮಕ