Publish Date: Wed, 18 Mar 2020 (11:56 IST)
Updated Date: Wed, 18 Mar 2020 (11:57 IST)
ನವದೆಹಲಿ: ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಿರುವ ಹ್ಯಾಂಗ್ ಮ್ಯಾನ್ ಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?
ನಿರ್ಭಯಾ ಹಂತಕರನ್ನು ಮಾರ್ಚ್ 20 ರಂದು ಗಲ್ಲಿಗೇರಿಸಲು ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಇವರನ್ನು ಗಲ್ಲಿಗೇರಿಸಲು ಉತ್ತರ ಪ್ರದೇಶದಿಂದ ಹ್ಯಾಂಗ್ ಮ್ಯಾನ್ ಪವನ್ ಜಲ್ಲದ್ ರನ್ನು ಕರೆತರಲಾಗುತ್ತಿದೆ.
ಅವರನ್ನು ಸಕಲ ಭದ್ರತೆಯೊಂದಿಗೆ ತಿಹಾರ್ ಜೈಲ್ ಗೆ ಕರೆತರಲಾಗುತ್ತದೆ. ಇಲ್ಲಿ ನಿಜವಾಗಿ ಅಪರಾಧಿಗಳ್ನು ಗಲ್ಲಿಗೇರಿಸುವ ಮೊದಲು ಅಣಕು ಗಲ್ಲಿಗೇರಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ ಅವರಿಗೆ ಪ್ರತೀ ಒಬ್ಬ ಅಪರಾಧಿಯನ್ನು ಗಲ್ಲಿಗೇರಿಸಲು ತಲಾ 20 ಸಾವಿರ ರೂ.ಗಳಂತೆ ಸಂಭಾವನೆ ಸಿಗಲಿದೆ.