Publish Date: Fri, 20 Mar 2020 (07:11 IST)
Updated Date: Fri, 20 Mar 2020 (07:12 IST)
ನವದೆಹಲಿ: 2012ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಇಂದು ಬೆಳಿಗ್ಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗಿದೆ.ಹಾಗೇ ಅಪರಾಧಿಗಳ ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗುವುದು.
ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ನಾಲ್ವರು ಅಪರಾಧಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.ಈ ಮರಣೋತ್ತರ ಪರೀಕ್ಷೆಯ ಸಂಪೂರ್ಣ ಚಿತ್ರೀಕರಣ ಕೂಡ ನಡೆಸಲಾಗುತ್ತದೆ.
ಸ್ಥಳೀಯ ಪೊಲೀಸರಿಗೆ ಅಪರಾಧಿಗಳ ಶವ ಹಸ್ತಾಂತರ ಮಾಡಲಾಗಿದೆ. ತಿಹಾರ್ ಜೈಲಿನ ಹಿಂಭಾಗದಲ್ಲಿರುವ ಗೇಟ್ ನಂ.4ರಿಂದ ಅಪರಾಧಿಗಳ ಶವ ರವಾನೆ.2 ಅಂಬ್ಯುಲೆನ್ಸ್ ಗಳಲ್ಲಿ ನಾಲ್ವರ ಶವ ರವಾನೆ ಮಾಡಲಾಗಿದೆ.