Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿ ಹೆಚ್ಚಳವಾಗುತ್ತಿರುವ ಹಿನ್ನಲೆ; 200 ಹಾಸಿಗೆಯ ಆಸ್ಪತ್ರೆ ಸಿದ್ದಪಡಿಸಿದ ಬಿಬಿಎಂಪಿ

ಕೊರೊನಾ ಭೀತಿ ಹೆಚ್ಚಳವಾಗುತ್ತಿರುವ ಹಿನ್ನಲೆ; 200 ಹಾಸಿಗೆಯ ಆಸ್ಪತ್ರೆ ಸಿದ್ದಪಡಿಸಿದ ಬಿಬಿಎಂಪಿ
ಬೆಂಗಳೂರು , ಗುರುವಾರ, 19 ಮಾರ್ಚ್ 2020 (10:38 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಂದು ಟಾಸ್ಕ್ ಪೋರ್ಸ್ ನ ಮೊದಲ ಸಭೆ ನಡೆಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಹರಡುತ್ತಿರುವ ಭೀತಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಈಗಾಗಲೇ ಕೊರೊನಾ ಸಂಬಂಧ ಚಿಕಿತ್ಸೆಗೆ 200 ಹಾಸಿಗೆಯ ಆಸ್ಪತ್ರೆ ಸಿದ್ದಪಡಿಸಲಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗದೆ. ಈ ಕಟ್ಟಡ ಕೊರೊನಾ ಸೋಂಕಿತರಿಗೆ ಮಾತ್ರ ಸೀಮಿತವಾಗಿದೆ. ಈ ಕಟ್ಟಡವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುತ್ತೇವೆ. ರಾಜ್ಯದಲ್ಲಿ 5 ಕಡೆ ಪ್ರಯೋಗಾಲಯ ಇದೆ. ಪ್ರತಿದಿನ 500 ಸ್ಯಾಂಪಲ್ ಗಳ ಪರೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭೀತಿ ಹಿನ್ನಲೆ; ಶಹಾಪುರ ಹಾಗೂ ಸುರಪುರ ಪಟ್ಟಣ ಬಂದ್