Publish Date: Thu, 19 Mar 2020 (10:19 IST)
Updated Date: Thu, 19 Mar 2020 (10:21 IST)
ಆಂಧ್ರಪ್ರದೇಶ : ಕೊರೊನಾ ಭೀತಿ ಹಿನ್ನಲೆಯಲ್ಲಿ ಇಂದಿನಿಂದ ಮಂತ್ರಾಲಯ ದೇವಾಲಯವನ್ನು ಬಂದ್ ಮಾಡಲಾಗಿದೆ.
ದೇಶದಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಕಾರಣ ಜನರು ಗುಂಪಾಗಿ ಸೇರುವುದನ್ನು ತಡೆಯಲು ಹಲವು ದೇವಾಲಯಗಳನ್ನು ಬಂದ್ ಮಾಡಲಾಗಿದೆ. ಅದೇರೀತಿ ಇದೀಗ ಇಂದಿನಿಂದ ಮಂತ್ರಾಲಯ ದೇವಾಲಯವನ್ನು ಬಂದ್ ಮಾಡಲಾಗಿದೆ. ಕೊರೊನಾ ಭೀತಿ ದೂರವಾಗುವವರೆಗೂ ಭಕ್ತರು ಮಂತ್ರಾಲಯಕ್ಕೆ ಬರಬೇಡಿ ಎಂದು ಮಠದ ಸ್ವಾಮಿಗಳು ಮನವಿ ಮಾಡಿದ್ದಾರೆ.
ಆದರೆ ಮಠದ ಒಳಗಡೆ ರಾಯರಿಗೆ ಪೂಜೆ ಪುರಸ್ಕಾರ ನಡೆಯಲಿದೆ. ಭಕ್ತರಿಗೆ ಮಾತ್ರ ದರ್ಶನ ರದ್ದು ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಅದೇರೀತಿ ಆದಿಚುಂಚನಗಿರಿ ಹಾಗೂ ನಂಜನಗೂಡು ದೇವಸ್ಥಾನವನ್ನು ಬಂದ್ ಮಾಡಲಾಗಿದೆ ಎನ್ನಲಾಗಿದೆ.