Publish Date: Tue, 17 Mar 2020 (20:10 IST)
Updated Date: Tue, 17 Mar 2020 (20:11 IST)
ಜಾಗತಿಕವಾಗಿ ಮಹಾಮಾರಿಯಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ನಿಂದ ಪೀಡಿತರಾದವರು ಇನ್ಮುಂದೆ ಆಸ್ಪತ್ರೆಯಿಂದ ಓಡಿಹೋಗುವಂತಿಲ್ಲ.
ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಾಗಲೇ ಪರಾರಿಯಾದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹೀಗಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವೈರಸ್ ಸೋಂಕಿತರು ಸಾಮಾಜಿಕ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಚಿಕಿತ್ಸೆ ನಡೆಯುತ್ತಿರುವಾಗಲೇ ಆಸ್ಪತ್ರೆಗಳಿಂದ ಪರಾರಿಯಾದರೆ ಅವರ ವಿರುದ್ಧ ಕೇಸ್ ದಾಖಲಾಗುತ್ತದೆ ಎಂದಿದ್ದಾರೆ.
ಕೊರೊನಾ ವೈರಸ್ ಕುರಿತು ಯಾರೂ ನಿಷ್ಕಾಳಜಿ ವಹಿಸಬಾರದು ಅಂತ ಅವರು ತಿಳಿಸಿದ್ದಾರೆ.