ನವದೆಹಲಿ: ಪಾರ್ಲಿಮೆಂಟ್‌ನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿನರೇಗಾ) ಬದಲಿಗೆ ಮಸೂದೆಯನ್ನು ಪರಿಚಯಿಸಿದೆ.
2005 ರಲ್ಲಿ ಅಂದಿನ ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರವು ನರೇಗಾ ಜಾರಿಗೆ ತಂದಿತ್ತು. 2009ರಲ್ಲಿ ಎಂಜಿನರೇಗಾ ಎಂದು ಮರುನಾಮಕರಣ ಮಾಡಲಾಯಿತ್ತು. ಇದೀಗ ಮೂರನೇ ಬಾರಿ ಯೋಜನೆಯ ಹೆಸರು ಬದಲಾವಣೆಗೆ ಸಿದ್ಧತೆ ನಡೆದಿದೆ.
ಕೇಂದ್ರ ಸರ್ಕಾರವು ಈ ಹೊಸ ಮಸೂದೆಯನ್ನು ದಿ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್' ಎಂದು ಕರೆಯಲಾಗುತ್ತದೆ. ಇದನ್ನು ಸಂಕ್ಷಿಪ್ತವಾಗಿ ವಿಬಿ ಜಿ ರಾಮ್ ಜಿ ಎಂದು ಕರೆಯಲಾಗುತ್ತದೆ. ಮಸೂದೆ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಸಂಸದರು ಸಂಸತ್ತಿಗೆ ಹಾಜರಾಗುವಂತೆ ವಿಪ್ ಹೊರಡಿಸಲಾಗಿದೆ. ಇದು ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಲಿದೆ.
ಈ ಹೊಸ ಮಸೂದೆಯು ವಿಕಸಿತ ಭಾರತ 2047 ಯೋಜನೆಗೆ ಹೊಸ ಚೌಕಟ್ಟು ಒದಗಿಸಲಿದೆ. ಎಂಜಿನರೇಗಾ ಯೋಜನೆಯನ್ನು 2005ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿತ್ತು. ಇದು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಮಸೂದೆಯಂತೆ 100 ದಿನಗಳ ಖಾತರಿಯನ್ನು 125 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ. ಕೆಲಸ ಮುಗಿದ ಒಂದು ವಾರದೊಳಗೆ ಅಥವಾ 15 ದಿನಗಳ ಒಳಗೆ ಪಾವತಿಗಳನ್ನು ಮಾಡಬೇಕೆಂದು ಸಹ ಇದು ಪ್ರಸ್ತಾಪಿಸುತ್ತದೆ. ಗಡುವಿನೊಳಗೆ ಪಾವತಿಗಳನ್ನು ಮಾಡದಿದ್ದರೆ, ನಿರುದ್ಯೋಗ ಭತ್ಯೆಗೆ ಸಹ ಅವಕಾಶವಿದೆ.