Select Your Language

Notifications

webdunia
webdunia
webdunia
webdunia

ಅಂತರಿಕ್ಷದಲ್ಲಿರುವ ಸುನಿತಾ, ವಿಲ್ಮೋರ್ ಭೂಮಿಗೆ ಬರುವ ಬಗ್ಗೆ ಬಿಗ್‌ ಅಪ್‌ಟೇಟ್ ಕೊಟ್ಟ ನಾಸಾ

ಅಂತರಿಕ್ಷದಲ್ಲಿರುವ  ಸುನಿತಾ, ವಿಲ್ಮೋರ್ ಭೂಮಿಗೆ ಬರುವ ಬಗ್ಗೆ ಬಿಗ್‌ ಅಪ್‌ಟೇಟ್ ಕೊಟ್ಟ ನಾಸಾ

Sampriya

ನವದೆಹಲಿ , ಗುರುವಾರ, 8 ಆಗಸ್ಟ್ 2024 (20:35 IST)
Photo Courtesy X
ನವದೆಹಲಿ: ತಾಂತ್ರಿಕ ದೋಷದಿಂದ ಪ್ರಸ್ತುತ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು ಭೂಮಿಗೆ ವಾಪಾಸ್ಸಾಗುವ ಬಗ್ಗೆ ಸ್ಪೇಸ್‌ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ.

ಬೋಯಿಂಗ್‌ನ ಸ್ಟಾರ್‌ಲೈನರ್‌ ಗಗನನೌಕೆ ಸುರಕ್ಷಿತವಲ್ಲ ಎಂದಾದಲ್ಲಿ ಸ್ಪೇಸ್‌ ಎಕ್ಸ್‌ನ ಡ್ರ್ಯಾಗನ್ ಗಗನನೌಕೆಯಲ್ಲಿ ಈ ಇಬ್ಬರು ಗಗನಯಾತ್ರಿಗಳನ್ನು ಮುಂದಿನ ವರ್ಷ ಫೆಬ್ರುವರಿ ವೇಳೆಗೆ ಮರಳಿ ಭೂಮಿಗೆ ಕರೆತರುವ ಯೋಜನೆ ರೂಪಿಸಲಾಗುವುದು ಎಂದು ನಾಸಾ ಎಕ್ಸ್‌ನಲ್ಲಿ ಫೋಸ್ಟ್‌ ಹಂಚಿಕೊಂಡಿದ್ದಾರೆ.

ಇಬ್ಬರು ಗಗನಯಾತ್ರಿಗಳನ್ನು ಜೂನ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ISS ಗೆ ಉಡಾವಣೆ ಮಾಡಲಾಯಿತು, ಇದು ಬಾಹ್ಯಾಕಾಶ ನೌಕೆಯ ಮೊದಲ ಸಿಬ್ಬಂದಿ ಕಾರ್ಯಾಚರಣೆಯನ್ನು ಗುರುತಿಸುತ್ತದೆ. ಈ ಕಾರ್ಯಾಚರಣೆಯನ್ನು ಆರಂಭದಲ್ಲಿ 10-ದಿನಗಳ ಅವಧಿಗೆ ನಿಗದಿಪಡಿಸಲಾಗಿತ್ತು, ಆದರೆ ಗಗನಯಾತ್ರಿಗಳು ISS ನಲ್ಲಿಯೇ ಉಳಿದಿದ್ದಾರೆ. ಅವರ ವಾಪಸಾತಿ ವಾಹನದ ನಿರ್ಧಾರವು ಇನ್ನೂ ಬಾಕಿ ಉಳಿದಿದೆ ಮತ್ತು ಇದು ಸ್ಟಾರ್‌ಲೈನರ್‌ನ ಸುರಕ್ಷತಾ ಮೌಲ್ಯಮಾಪನಗಳ ಫಲಿತಾಂಶದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.

ನಾಸಾ ಪ್ರಸ್ತುತ ಗಗನಯಾತ್ರಿಗಳ ಸುರಕ್ಷಿತ ವಾಪಸಾತಿಗಾಗಿ ಅನೇಕ ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ಇವುಗಳಲ್ಲಿ, ಸ್ಪೇಸ್‌ಎಕ್ಸ್ ಅಭಿವೃದ್ಧಿಪಡಿಸಿದ ಕ್ರೂ ಡ್ರ್ಯಾಗನ್ ಅನ್ನು ಕಾರ್ಯಸಾಧ್ಯವಾದ ಪರ್ಯಾಯವೆಂದು ಪರಿಗಣಿಸಲಾಗಿದೆ. ಫೆಬ್ರವರಿ 2025 ರ ವೇಳೆಗೆ ಬೋಯಿಂಗ್‌ನ ಸ್ಟಾರ್‌ಲೈನರ್ ಭೂಮಿಯ ವಾತಾವರಣವನ್ನು ಮರು-ಪ್ರವೇಶಿಸಲು ಅಸುರಕ್ಷಿತವೆಂದು ಪರಿಗಣಿಸಿದರೆ, ವಿಲಿಯಮ್ಸ್ ಮತ್ತು ವಿಲ್ಮೋರ್‌ರನ್ನು ಮರಳಿ ಭೂಮಿಗೆ ಕರೆತರುವ ಕಾರ್ಯವನ್ನು ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ವಹಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಲ್ಡೀವ್ಸ್‌ನತ್ತ ಸಚಿವ ಜೈಶಂಕರ್: ಉಭಯ ರಾಷ್ಟ್ರಗಳ ಸಂಬಂಧ ಇನ್ನಾದರೂ ಸರಿಹೋಗುತ್ತಾ