Select Your Language

Notifications

webdunia
webdunia
webdunia
webdunia

ಶಾಸಕರ ಕಿರು ನಿದ್ದೆಗೆ ಸೊಲ್ಯೂಷನ್ ಹುಡುಕಿದ ಸಭಾಧ್ಯಕ್ಷ ಯುಟಿ ಖಾದರ್

ಶಾಸಕರ ಕಿರು ನಿದ್ದೆಗೆ ಸೊಲ್ಯೂಷನ್ ಹುಡುಕಿದ ಸಭಾಧ್ಯಕ್ಷ ಯುಟಿ ಖಾದರ್

Sampriya

ಬೆಂಗಳೂರು , ಶುಕ್ರವಾರ, 19 ಜುಲೈ 2024 (15:38 IST)
Photo Courtesy X
ಬೆಂಗಳೂರು:  ಅಧಿವೇಶನದ ಸಂದರ್ಭದಲ್ಲಿ ಮಧ್ಯಾಹ್ನ ಊಟಕ್ಕೆನಂತರ ಶಾಸಕರು ಕಿರು ನಿದ್ರೆಗೆ ಜಾರಲು ವಿಶೇಷ ಆಸನದ ವ್ಯವಸ್ಥೆ ಮಾಡಲು ವಿಧಾನಸಭೆ ಸಭಾಧ್ಯಕ್ಷ ಯುಟಿ ಖಾದರ್ ಅವರು ಚಿಂತಿಸಿದ್ದಾರೆ.

ಈ ಕುರಿತು ಮುಂಗಾರು ಅಧಿವೇಶನ ನಾಲ್ಕನೇ ದಿನವಾದ ಇಂದು ಸಭಾಧ್ಯಕ್ಷರು ಪ್ರಸ್ತಾಪಿಸಿದ್ದಾರೆ. ಮಧ್ಯಾಹ್ನದ ನಂತರ ಊಟಕ್ಕೆ ಹೋದ ಶಾಸಕರು ಕಿರು ನಿದ್ದೆ ಮಾಡಿ ಬರುತ್ತೇವೆ ಎಂದು ಹೇಳಿ ಹೋಗುವವರು ವಾಪಾಸ್ಸಾಗುವುದಿಲ್ಲ. ಶಾಸಕರ ಹಾಜಾರಾತಿಯನ್ನು ಗಮನದಲ್ಲಿಟ್ಟುಕೊಂಡು ಇದೀಗ ಸಭಾಧ್ಯಕ್ಷರು ಈ ನಿರ್ಧಾರ ಕೈಗೊಂಡಿದ್ದಾರೆ.

ಶಾಸಕರ ಕಿರು ನಿದ್ರೆಗಾಗಿ ಪ್ರಾಯೋಗಿಕವಾಗಿ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಒಂದು ರಿಕ್ಲೈನರ್ ಕುರ್ಚಿ ಹಾಕಲಾಗಿದೆ. ಶಾಸಕರು ಅದರ ಮೇಲೆ ಕಿರು ನಿದ್ರೆ ಮಾಡಿ ಸದನಕ್ಕೆ ಬರಬಹುದು. ಆ ರಿಕ್ಲೈನರ್​ ಕುರ್ಚಿ ಸರಿ ಎನಿಸಿದ್ದಲ್ಲಿ ಈ ವ್ಯವಸ್ಥೆಯನ್ನು  ಅಧಿಕೃತ್ಯವಾಗಿ ಜಾರಿಗೆ ತರುತ್ತೇನೆ  ಎಂದು ಸಭಾಧ್ಯಕ್ಷ ಯುಟಿ ಖಾದರ್​ ಸದಸ್ಯರಿಗೆ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮೈಕ್ರೋಸಾಫ್ಟ್ ಡೌನ್: ಬ್ಯಾಂಕ್, ಏರ್ ಪೋರ್ಟ್ ಸೇರಿದಂತೆ ಎಲ್ಲೆಡೆ ತಲ್ಲಣ