Publish Date: Fri, 19 Jul 2024 (18:57 IST)
Updated Date: Fri, 19 Jul 2024 (19:01 IST)
ಬೆಂಗಳೂರು: ಸದನದಲ್ಲಿ ಇಂದು ಬಿಜೆಪಿಗರ ವಿರುದ್ಧ ರೊಚ್ಚಿಗೆದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಂಟ್ರೋಲ್ ಮಾಡಲು ಕಬ್ಬಿಣ ಕೊಡ್ರಿ ಎಂದು ಸ್ಪೀಕರ್ ಯುಟಿ ಖಾದರ್ ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಧಿವೇಶನದಲ್ಲಿ ಮಾತಿಗೆ ಅವಕಾಶ ಕೋರಿದ ಪ್ರದೀಪ್ ಈಶ್ವರ್ ಅವರು ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡದೆ ಬಿಜೆಪಿ ವಿರುದ್ಧ ಆವೇಷಕ್ಕೆ ಒಳಗಾಗಿ ಆಕ್ರೋಶದ ಮಾತುಗಳನ್ನಾಡಿದ್ದರು. ಈ ವೇಳೆ ಯಾರಾ ಕಂಟ್ರೋಲಿಗೂ ಸಿಗದೆ ಕಿರುಚಾಡಿದ್ದಾರೆ. ಪ್ರದೀಪ್ ಅವರನ್ನು ಕಂಟ್ರೋಲ್‌ಗೆ ತರಲು ಸ್ಪೀಕರ್ ಯುಟಿ ಖಾದರ್ ಅವರು ಪ್ರದೀಪ್ ಈಶ್ವರ್ ಕೈಗೆ ಯಾರಾದ್ರೂ ಕಬ್ಬಿಣ ಕೊಡಿ ಎಂದಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ: ಬಿಜೆಪಿ ವಿರುದ್ಧ ಆಕ್ರೋಶದ ಮಾತುಗಳಾಡುತ್ತಿದ್ದ ಪ್ರದೀಪ್ ಈಶ್ವರ್ ಅವರನ್ನು ಸುಮ್ಮನೇ ಕೂರುವಂತೆ ಸ್ಪೀಕರ್ ಅವರು ಸಾವಧಾನದಿಂದಲೇ ಹೇಳಿದ್ದಾರೆ. ಆದರೆ ಪ್ರದೀಪ್ ಈಶ್ವರ್ ಅದಕ್ಕೆ ಕ್ಯಾರೇ ಎನ್ನಲಿಲ್ಲ. ಈ ವೇಳೆ ಸ್ಪೀಕರ್ ಅವರು ಪ್ರದೀಪ್ ಈಶ್ವರ್, ಕುಳಿತುಕೊಳ್ರೀ, ನಿಮ್ಮ ಕೈಗೆ ಕಬ್ಬಿಣ ಕೊಡ್ಬೇಕಾ ಅಂತ ಗದರಿಸಿದ್ರು.