Publish Date: Tue, 09 Oct 2018 (10:31 IST)
Updated Date: Tue, 09 Oct 2018 (10:34 IST)
ಚೆನ್ನೈ: ಪತ್ರಕರ್ತ ನಕ್ಕೀರನ್ ಗೋಪಾಲನ್ ನನ್ನು ಇಂದು ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ. ರಾಜಭವನದ ದೂರಿನ ಮೇರೆಗೆ ಬಂಧನ ಮಾಡಲಾಗಿದೆ.
ನಿರ್ಮಲಾ ದೇವಿ ಪ್ರಕರಣದ ಬಗ್ಗೆ ವಿವಾದಾತ್ಮಕ ಲೇಖನ ಪ್ರಕಟಿಸಿದ್ದಕ್ಕೆ ನಕ್ಕೀರನ್ ಗೋಪಾಲನ್ ನನ್ನು ಬಂಧಿಸಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಿಂದ ಪುಣೆಗೆ ತೆರಳಲು ಹೊರಟಿದ್ದ ಈತನನ್ನು ವಿಶೇಷ ಪೊಲೀಸ್ ಪಡೆ ಬಂಧಿಸಿದೆ. ಉತ್ತಮ ಅಂಕ ನೀಡಲು ಕಾಲೇಜು ವಿದ್ಯಾರ್ಥಿಗಳಿಗೆ ಲೈಂಗಿಕ ಸುಖ ನೀಡಬೇಕೆಂದು ಬೆದರಿಸುತ್ತಿದ್ದ ಶಿಕ್ಷಕಿ ನಿರ್ಮಲಾ ದೇವಿ ಪ್ರಕರಣದಲ್ಲಿ ರಾಜ್ಯಪಾಲರ ಕೈವಾಡವೂ ಇದೆ ಎಂದು ಗೋಪಾಲನ್ ವಿವಾದಾತ್ಮಕ ಲೇಖನ ಬರೆದಿದ್ದ.
ದಂತಚೋರ ವೀರಪ್ಪನ್ ವರ ನಟ ರಾಜ್ ಕುಮಾರ್ ರನ್ನು ಬಂಧಿಸಿದ್ದಾಗ ಈತ ಸಂಧಾನಕಾರನಾಗಿ ಕೆಲಸ ಮಾಡಿದ್ದ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.