Select Your Language

Notifications

webdunia
webdunia
webdunia
webdunia

ಲೈಂಗಿಕ ಅಶ್ಲೀಲ ಪ್ರಕಟಿಸುತ್ತಿದ್ದ ವೆಬ್ ಸೈಟ್ ಗಳು ಬಂದ್

ಲೈಂಗಿಕ ವೆಬ್ ಸೈಟ್
ನವದೆಹಲಿ , ಮಂಗಳವಾರ, 9 ಅಕ್ಟೋಬರ್ 2018 (09:03 IST)
ನವದೆಹಲಿ: ಲೈಂಗಿಕ ವಿಚಾರಗಳ ಬಗ್ಗೆ ಅಶ್ಲೀಲ ವಿಚಾರಗಳನ್ನು ಪ್ರಕಟಿಸುತ್ತಿದ್ದ ಐದು ವೆಬ್ ಸೈಟ್ ಗಳ ವಿರುದ್ಧ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ದೂರು ನೀಡಬಹುದಾದ ಪೋರ್ಟಲ್ ಒಂದನ್ನು ಕೇಂದ್ರ ಚಾಲನೆ ನೀಡಿದ ಬೆನ್ನಲ್ಲೇ ದೆಹಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಇಂತಹ ವೆಬ್ ಸೈಟ್ ಗಳ ವಿರುದ್ಧ ಸ್ವಯಂ ದೂರು ದಾಖಲಿಸಲು ಕಳೆದ ತಿಂಗಳಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪೋರ್ಟಲ್ ಒಂದಕ್ಕೆ ಚಾಲನೆ ನೀಡಿದ್ದರು.

ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಪೋರ್ಟಲ್ ನಲ್ಲಿ ನೀಡಿದ ದೂರಿನ ಮೇರೆಗೆ ದೂರು ದಾಖಲಿಸಲಾಗಿದೆ. ಈ ವೆಬ್ ಸೈಟ್ ಗಳಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಪ್ರಕಟಿಸಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ಶಬರಿಮಲೆ ಪ್ರತಿಭಟನೆ ತೀವ್ರ