Select Your Language

Notifications

webdunia
webdunia
webdunia
webdunia

ಅಪ್ಪನ ನಿಗೂಢ ಸತ್ಯ ಬಿಚ್ಚಿಟ್ಟ ಬಾಲಕಿ!

ಅಪ್ಪನ ನಿಗೂಢ ಸತ್ಯ ಬಿಚ್ಚಿಟ್ಟ ಬಾಲಕಿ!
ಭೋಪಾಲ್ , ಗುರುವಾರ, 28 ಅಕ್ಟೋಬರ್ 2021 (13:14 IST)
ಭೋಪಾಲ್ : 13 ವರ್ಷದ ಬಾಲಕಿಯೊಬ್ಬಳ  ತಂದೆಯ  ನಿಗೂಢ ಸತ್ಯವನ್ನು ಬಿಚ್ಚಿಟ್ಟಿದ್ದು, ಇಡೀ ಊರಿಗೆ ಊರೇ ಅಚ್ಚರಿಗೊಂಡಿದೆ.
ಪೊಲೀಸ್ ಠಾಣೆಗೆ ತೆರಳಿದ್ದ ಬಾಲಕಿ ತಂದೆ ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ಬಾಲಕಿ ಮಾತು ಕೇಳಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ತಂದೆಯ ಅಸಲಿ ಮುಖ ಬಟಾಬಯಲಾಗಿದೆ. ಈ ಘಟನೆ ನಡೆದಿದ್ದು ಮಧ್ಯ ಪ್ರದೇಶದ ಛಿಂದ್ವಾಡದ ಸಿಂಗೊಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಈ ಬಗ್ಗೆ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಾಲಕಿ ಹೇಳಿದ ಸತ್ಯವಾದ್ರೂ ಏನು?
ಸೋಮವಾರ ಮನೆಗೆ ಅಜೇಶ್ ಎಂಬಾತನನ್ನು ಕರೆದುಕೊಂಡು ಬಂದಿದ್ದನು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಅದಾಗಲೇ ಜೊತೆಯಲ್ಲಿಯೇ  ಇಬ್ಬರು ಮದ್ಯ ಸೇವನೆ ಮಾಡಿದ್ದರು.ಜಗಳ ವಿಕೋಪಕ್ಕೆ ತಿರುಗಿದಾಗ ಮದ್ಯದ ನಶೆಯಲ್ಲಿದ್ದ  ಕನ್ನಯ್ಯ ಭರ್ಜಿಯಿಂದ ಇರಿದು ಅಜೇಶ್ ನನ್ನು ಕೊಲೆ ಮಾಡಿದ್ದನು. ಕೊಲೆ ನಂತರ ಶವವನ್ನು ಉಪಾಯವಾಗಿ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದನು. ಈ ಎಲ್ಲ ಘಟನೆಯನ್ನು ಬಾಲಕಿ ಪೊಲೀಸರ ಮುಂದೆ ವಿವರಿಸಿದ್ದಳು.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮಮತಾ ಬ್ಯಾನರ್ಜಿ ಗೋವಾಕ್ಕೆ ಭೇಟಿ