Select Your Language

Notifications

webdunia
webdunia
webdunia
webdunia

ಇಂದು ಮಮತಾ ಬ್ಯಾನರ್ಜಿ ಗೋವಾಕ್ಕೆ ಭೇಟಿ

ಇಂದು ಮಮತಾ ಬ್ಯಾನರ್ಜಿ ಗೋವಾಕ್ಕೆ ಭೇಟಿ
ನವದೆಹಲಿ , ಗುರುವಾರ, 28 ಅಕ್ಟೋಬರ್ 2021 (13:07 IST)
ನವದೆಹಲಿ, . 28 :  ಉತ್ತ ಪ್ರದೇಶ, ಪಂಜಾಬ್ ಮಣಿಪುರ ಉತ್ತರ ಖಂಡ ಮತ್ತು ಗೋವಾ ವಿಧಾನಸಭಾ ಚುನಾವಣೆ ಮುಂದಿನ ವರ್ಷದ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ.
2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದ್ದರೆ ಸ್ಥಳೀಯ ಪಕ್ಷಗಳಾದ ಆಮ್ ಆದ್ಮಿಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಗಳಿಗೆ ನೆಲೆ ವಿಸ್ತರಣೆ ಮಾಡಿಕೊಳ್ಳುವ ದೃಷ್ಟಿಯಿಂದ ಗೋವಾ ವಿಧಾನಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾದುದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಟಿಎಂಸಿ ಅಧಿನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೋವಾಕ್ಕೆ ಭೇಟಿ ನೀಡಿ ಅಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್‍ನಿಂದಾಗಿ ಕೇರಳದಲ್ಲಿ ಮೃತಪಟ್ಟ ಗರ್ಭಿಣಿಯ ಸಂಖ್ಯೆ ಎಷ್ಟು?!