Publish Date: Mon, 25 Oct 2021 (18:22 IST)
Updated Date: Mon, 25 Oct 2021 (21:26 IST)
ಬೆಂಗಳೂರು : ಹಾನಗಲ್‌ನಲ್ಲೇ ಮುಖ್ಯಮಂತ್ರಿಯವರು ಠಿಕಾಣಿ ಹೂಡಿರುವುದು ಅವರಿಗೆ ಉಪ ಚುನಾವಣೆಯಲ್ಲಿ ಸೊಲಿನ ಭಯ ಬಂದಿರುವುದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ, ಹಿಂದೆಯೂ ಕೊಟ್ಟ ಮಾತು ಉಳಿಸಿಕೊಂಡಿಲ್ಲ.ಹೀಗಾಗಿ ಅವರಿಗೆ ಭಯ ಬಂದಿದೆ ಎಂದು ಹೇಳಿದರು.
ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎರಡೂ ಕಡೆ ಜಯಗಳಿಸಲಿದೆ . ಆಡಳಿತಾರೂಢ ಬಿಜೆಪಿ ಎಷ್ಟೇ ಅಧಿಕಾರ ದುರುಪಯೋಗ, ಹಣ ಹಂಚಿಕೆ ಮಾಡಿದರೂ ಗೆಲುವು ನಮ್ಮದೇ ಎಂದು ಹೇಳಿದರು.