Select Your Language

Notifications

webdunia
webdunia
webdunia
webdunia

ದೇಶದಲ್ಲಿ ಜೈನ ಸಮುದಾಯ ಬಿಜೆಪಿ ಜತೆಗಿದೆ;ಬೊಮ್ಮಾಯಿ

ದೇಶದಲ್ಲಿ ಜೈನ ಸಮುದಾಯ ಬಿಜೆಪಿ ಜತೆಗಿದೆ;ಬೊಮ್ಮಾಯಿ
ಬೆಂಗಳೂರು , ಮಂಗಳವಾರ, 26 ಅಕ್ಟೋಬರ್ 2021 (08:57 IST)
ಬೆಂಗಳೂರು : ಅಕ್ಟೋಬರ್ 30ರಂದು ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ನಿಗದಿಯಾಗಿದ್ದು, ಆಡೂರು ಗ್ರಾಮದಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ ಸಭೆ ನಡೆಸಿದರು.
ವೀರಶೈವ ಲಿಂಗಾಯತ, ಬಣಜಿಗ, ಮರಾಠ,ಜೈನ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ತ್ಯಾಗದ ಸಂಕೇತವಾದ ಶ್ರೇಷ್ಠ ಸಮುದಾಯ ಜೈನ ಸಮಾಜ. ಚುನಾವಣೆಯ ಸಮಯದಲ್ಲಿ ಭರವಸೆಗಳನ್ನ ಕೊಡುವಂತಿಲ್ಲ. ನಿಮ್ಮ ಮನದಾಳದ ಬೇಡಿಕೆಗೆ ನಮ್ಮ ಸರ್ಕಾರ ಸ್ಪಂದಿಸಲಿದೆ ಎಂದು ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.
ಜೈನ ಸಮುದಾಯದ ಹಲವು ಬೇಡಿಕೆ‌ಗಳು ಬಾಕಿ ಇವೆ. ದೇಶದಲ್ಲಿ ಜೈನ ಸಮುದಾಯ ನಮ್ಮ ಬಿಜೆಪಿ ಜೊತೆಗಿದೆ. ಈ ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ ಎಂದು ಆಶಿಸಿದ ಸಿಎಂ ಬೊಮ್ಮಾಯಿ ಸಂಖ್ಯೆಗಿಂತ ಒಗ್ಗಟ್ಟು- ಪ್ರೀತಿ ಮುಖ್ಯ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.


Share this Story:

Follow Webdunia kannada

ಮುಂದಿನ ಸುದ್ದಿ

ವಾರಾಣಸಿಯಲ್ಲಿ ಆಯುಷ್ಮಾನ್ ಭಾರತ್ ಮಿಷನ್​ಗೆ ಪ್ರಧಾನಿ ಚಾಲನೆ