Select Your Language

Notifications

webdunia
webdunia
webdunia
webdunia

ಕಾಂಮಾಧರರ ಅಟ್ಟಹಾಸಕ್ಕೆ ಎಲ್ಲಿದೆ ಅಂತ್ಯ!?

ಕಾಂಮಾಧರರ ಅಟ್ಟಹಾಸಕ್ಕೆ ಎಲ್ಲಿದೆ ಅಂತ್ಯ!?
ಮುಂಬೈ , ಸೋಮವಾರ, 25 ಅಕ್ಟೋಬರ್ 2021 (11:03 IST)
ಮುಂಬೈ : ಈ ದೇಶದ ಸದ್ಯದ ಪರಿಸ್ಥಿತಿ ನಿಜಕ್ಕೂ ಶೋಚನಿಯ. ಪ್ರತಿದಿನ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹೇಯ ಕೃತ್ಯಗಳು ನಡೆಯುತ್ತಲೇ ಇದೆ.
ಇದಕ್ಕೆಲ್ಲ ಕೊನೆಯೇ ಇಲ್ವಾ? ಹಸುಳೆಗಳ ಮೇಲೆ ಎರಗುವ ಈ ಕಾಮ ಪಿಶಾಚಿಗಳ ಹುಟ್ಟಡಗಿಸುವುದು ಯಾರು? ಈ ಪ್ರಶ್ನೆಗಳಿಗೆ ಉತ್ತರ ಇಲ್ಲ. ಮುಂಬೈನಲ್ಲಿ ಕಾಮಾಂಧ ವೈದ್ಯನೊಬ್ಬ ವಿಶೇಷಚೇತನ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಚಿಕಿತ್ಸೆಗೆಂದು ಹೋದಾಗೆಲ್ಲ ಅತ್ಯಾಚಾರ!
16 ವರ್ಷದ ಬಾಲಕಿ ಮಾತಿನ ದುರ್ಬಲತೆ ಹಾಗೂ ಕೆಲ ದೈಹಿಕ ಅಂಗವೈಕಲ್ಯದ ಸಮಸ್ಯೆಯಿಂದ ಬಳಲುತ್ತಿದ್ದಳು. ಹೀಗಾಗಿ ಮುಂಬೈನ ಕ್ಲಿನಿಕ್ವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. 40 ವರ್ಷದ ವೈದ್ಯ ಈಕೆಗೆ ಚಿಕಿತ್ಸೆ ನೀಡುತ್ತಿದ್ದ. ಈಕೆಯ ಸಮಸ್ಯೆಗಳನ್ನ ಅರಿತ ವೈದ್ಯ ಮಾಡಿದ್ದು ಮಾತ್ರ ಹೇಯ ಕೃತ್ಯ. ಸರಿಯಾಗಿ ಮಾತನಾಡಲು ಬಾರದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆದರೆ ಯುವತಿ ಮೊದಲು ಚಿಕಿತ್ಸೆಗಾಗಿ ಈ ರೀತಿಯ ವರ್ತನೆ ತೋರಿದ್ದಾನೆ ಎಂದು ಸುಮ್ಮನಾಗಿದ್ದಳು. ಆದರೆ ಕ್ಲಿನಿಕ್ಗೆ ಬಂದಾಗಲೆಲ್ಲ ಆತನ ದುರ್ವತನೆ ಮಿತಿಮೀರಿತ್ತು. ಮೊನ್ನೆ ಕೂಡ ಚಿಕಿತ್ಸೆಗೆ ಬಂದಾಗ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೂರು ತಿಂಗಳ ಹಸುಗೂಸ ಕೊಂದ ತಾಯಿ