ಉತ್ತರ ಪ್ರದೇಶ: ಹಿಂದೂ ಎಂದು ಸುಳ್ಳು ಹೇಳಿಕೊಂಡು ದೇವಸ್ಥಾನವೊಂದರಲ್ಲಿ ಹಿಂದೂ ಯುವತಿಯನ್ನು ಮದುವೆಯಾಗುತ್ತಿದ್ದ ಮುಸ್ಲಿಂ ವ್ಯಕ್ಯಿಯನ್ನು ಬಂಧಿಸಲಾಗಿದೆ.
ಬೆಳ್ಹಾ ಮಾಯ್ ದೇವಾಲಯದ ಪ್ರಧಾನ ಅರ್ಚಕ ಮಂಗಳ ಪ್ರಸಾದ್ ಅವರ ಮಾಹಿತಿಯ ಮೇರೆಗೆ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಲಾಲ್ ತಿಳಿಸಿದ್ದಾರೆ.
ಮುಖ್ಯ ಅರ್ಚರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನುಮಾನ ಬಂದಾಗ ದಂಪತಿಗಳ ಹೆಸರನ್ನು ಕೇಳಿರುವುದಾಗಿ ಮುಖ್ಯ ಅರ್ಚಕರು ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಎಎಸ್ಪಿ ಹೇಳಿದ್ದಾರೆ.
ಮಹಿಳೆ ತನ್ನ ಹೆಸರನ್ನು ಶಾಲಿನಿ ಪ್ರಜಾಪತಿ ಎಂದು ಬಹಿರಂಗಪಡಿಸಿದ್ದು, ಪ್ರಯಾಗ್‌ರಾಜ್‌ನ ಮಲಕಾ ನಿವಾಸಿಯಾಗಿದ್ದು, ವ್ಯಕ್ತಿ ತನ್ನ ಹೆಸರು ರಾಜೀವ್, ಪ್ರಯಾಗ್‌ರಾಜ್‌ನ ಮಲಕಾ ನಿವಾಸಿ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.