Select Your Language

Notifications

webdunia
webdunia
webdunia
webdunia

ಫಸ್ಟ್ ನೈಟ್ ಗೆ ನನ್ನ ಮುಟ್ಟಿದ್ರೆ 35 ಪೀಸ್ ಮಾಡ್ತೀನಿ ಎಂದ ಪತ್ನಿ

crime

Krishnaveni K

ಲಖನೌ , ಗುರುವಾರ, 26 ಜೂನ್ 2025 (09:46 IST)
Photo Credit: X
ಲಖನೌ: ಫಸ್ಟ್ ನೈಟ್ ದಿನ ನನ್ನ ಮುಟ್ಟಿದ್ರೆ ನಿನ್ನ 35 ಪೀಸ್ ಮಾಡ್ತೀನಿ ಎಂದು ಪತ್ನಿ ಚಾಕು ಹಿಡಿದು ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಘಟನೆ ನಡೆದಿಎ. ಕ್ಯಾಪ್ಟನ್ ನಿಷಾದ್ ಎಂಬಾತನ ಮದುವೆ ಸಿತಾರ ಎಂಬ ಕರಭಾನಾ ದೀಹ ಗ್ರಾಮದ ಯುವತಿಯೊಂದಿಗೆ ನೆರವೇರಿತ್ತು. ಏಪ್ರಿಲ್ 29 ರಂದು ಮದುವೆಯಾಗಿದ್ದು ಮೇ 2 ರಂದು ರಿಸೆಪ್ಷನ್ ಬಳಿಕ ಫಸ್ಟ್ ನೈಟ್ ಗೆ ಕೋಣೆ ಸಿದ್ಧಗೊಳಿಸಲಾಗಿತ್ತು.

ಆದರೆ ಗಂಡ ನಿಷಾದ್ ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೇ ಚಾಕು ಹಿಡಿದು ನಿಂತಿದ್ದ ಸಿತಾರ ನನ್ನ ಮೈ ಮುಟ್ಟಿದ್ರೆ ಹುಷಾರ್. ಈ ದೇಹ ಅಮನ್ ನ ಆಸ್ತಿ. ನೀನೇನಾದರೂ ನನ್ನ ಮುಟ್ಟಲು ಬಂದರೆ 35 ಪೀಸ್ ಮಾಡ್ತೀನಿ ಎಂದು ಚಾಕು ಹಿಡಿದು ಬೆದರಿಸಿದ್ದಳು. ಇದರಿಂದ ಭಯಗೊಂಡ ನಿಷಾದ್ ದೂರವೇ ಉಳಿದಿದ್ದ.

ಆದರೆ ಸುಮಾರು ಮೂರು ರಾತ್ರಿ ಇದೇ ರೀತಿ ಮುಂದುವರಿದಿತ್ತು. ಆಕೆ ತಡವಾಗಿ ಮಲಗುತ್ತಿದ್ದಳು. ಆಕೆ ಮಲಗದೇ ನಿಷಾದ್ ಗೂ ಮಲಗಲು ಭಯವಾಗುತ್ತಿತ್ತು. ಎಲ್ಲಿ ತನ್ನನ್ನು ಚುಚ್ಚಿ ಬಿಡುತ್ತಾಳೋ ಎಂಬ ಭಯ. ಬಳಿಕ ನಿಷಾದ್ ಕುಟುಂಬದವರಿಗೆ ತಿಳಿಸಿದ್ದು ಕುಟುಂಬಸ್ಥರು ಪರಸ್ಪರ ರಾಜಿ ಸಂಧಾನ ನಡೆಸಿ ಸಿತಾರ ಕೂಡಾ ಪತಿ ಜೊತೆ ಇರಲು ಒಪ್ಪಿದ್ದಳು. ಆದರೆ ಮೇ 30 ಕ್ಕೆ ತನ್ನ ಪ್ರಿಯಕರ ಅಮನ್ ಜೊತೆ ಪರಾರಿಯಾಗಿದ್ದಾಳೆ.

ಇತ್ತೀಚೆಗಷ್ಟೇ ಮೇಘಾಲಯದಲ್ಲಿ ನಡೆದ ರಾಜ ರಘುವಂಶಿ ಪ್ರಕರಣ ಇನ್ನೂ ಹಸಿಯಾಗಿಯೇ ಇದೆ. ಇಂತಹದ್ದೇ ಘಟನೆಗಳು ಇತ್ತೀಚೆಗೆ ಒಂದೊಂದಾಗಿ ವರದಿಯಾಗುತ್ತಿರುವುದು ಆತಂಕಕಾರೀ ಬೆಳವಣಿಗೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಂಟಿ ಹೊರೆ ಜನರ ತಲೆಗೆ: ವಿದ್ಯುತ್ ಬಿಲ್ ಜೊತೆ ನೌಕರರ ವೆಚ್ಚಕ್ಕೂ ಇನ್ನು ನೀವೇ ಹೊಣೆ