Select Your Language

Notifications

webdunia
webdunia
webdunia
webdunia

Video: ಪೊಲೀಸರ ಮೇಲೆಯೇ ದಾಳಿ ಮಾಡಿದ ದುಷ್ಕರ್ಮಿಗಳಿಗೆ ಯುಪಿ ಪೊಲೀಸರು ಪಾಠ ಕಲಿಸಿದ್ದು ಹೀಗೆ

Viral video

Krishnaveni K

ಲಕ್ನೋ , ಸೋಮವಾರ, 7 ಜುಲೈ 2025 (12:42 IST)
Photo Credit: X
ಲಕ್ನೋ: ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ದಾಳಿ ಮಾಡಿದವರಿಗೆ ಉತ್ತರ ಪ್ರದೇಶದಲ್ಲಿ ತಕ್ಕ ಪಾಠ ಕಲಿಸಲಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದೆ. ರಾತ್ರಿ ವೇಳೆ ಪೊಲೀಸರು ಗಲ್ಲಿ ಗಲ್ಲಿಗಳಲ್ಲಿ ಭದ್ರತೆಗಾಗಿ ಗಸ್ತು ತಿರುಗುವುದು ಸಾಮಾನ್ಯ. ಅದರಂತೆ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಉತ್ತರ ಪ್ರದೇಶದ ಪಿಲಿಭಿತ್ ನಲ್ಲಿ ನಾಲ್ವರು ಅನ್ಯ ಕೋಮಿನ ವ್ಯಕ್ತಿಗಳು ದಾಳಿ ನಡೆಸಿದ್ದರು.

ಈ ವೇಳೆ ಪೊಲೀಸರು ಈ ದುಷ್ಕರ್ಮಿಗಳ ಜೊತೆ ಬೀದಿಯಲ್ಲೇ ಸೆಣಸಾಡಿ ಕೊನೆಗೆ ಮೂವರನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಠಾಣೆಗೆ ಕರೆದೊಯ್ದು ಮೂವರಿಗೂ ಪೊಲೀಸರು ಸರಿಯಾಗಿ ಬೆಂಡೆತ್ತಿದ್ದಾರೆ. ನಂತರ ಎಲ್ಲರನ್ನೂ ರಿಲೀಸ್ ಮಾಡಲಾಗಿದೆ.

ರಿಲೀಸ್ ಮಾಡುವಾಗ ಕ್ಷಮೆ ಕೇಳಲು ಪೊಲೀಸರು ಹೇಳಿದ್ದಾರೆ. ಅದರಂತೆ ಮೂವರೂ ಕುಂಟುತ್ತಾ ತಾವು ಮಾಡಿದ ತಪ್ಪಿಗೆ ದಯನೀಯವಾಗಿ ಕೈ ಮುಗಿದು ನಿಂತು ಕ್ಷಮೆ ಕೇಳಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಳೆ ಬದಿ ಸ್ನಾನ ಮಾಡುವಾಗ ಬಂತೊಂದು ದೊಡ್ಡ ಸರ್ಪ: ಶಾಕಿಂಗ್ ವಿಡಿಯೋ