ಲಕ್ನೋ: ಬೈಕ್ ನಲ್ಲಿ ವೀಲಿಂಗ್ ಮಾಡುವುದು, ಏನೇನೋ ಸರ್ಕಸ್ ಮಾಡಲು ಹೋಗಿ ದುರಂತಕ್ಕೀಡಾಗುವ ಅನೇಕ ಘಟನೆಗಳನ್ನು ನೋಡಿದ್ದೇವೆ. ಅಂತಹದ್ದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿ ಕೆಲವು ಯುವಕರ ಗುಂಪು ಹೆದ್ದಾರಿಯಲ್ಲಿ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ರಾತ್ರಿ ಹೊತ್ತು ಮಲಗಿಕೊಂಡು ಬೈಕ್ ವೇಗವಾಗಿ ಚಲಾಯಿಸುವ ಹುಚ್ಚು ಸಾಹಸ ಮಾಡಿದ್ದಾರೆ. ವೀಲಿಂಗ್ ನಷ್ಟೇ ಅಪಾಯಕಾರಿ ಸ್ಟಂಟ್ ಇದಾಗಿತ್ತು.
ಒಟ್ಟು ಐದು ಯುವಕರು, ಐದು ಬೈಕ್ ಗಳಲ್ಲಿ ಸಾಹಸ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಪೈಕಿ ಓರ್ವ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಲಾರಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನು ನೋಡುತ್ತಿದ್ದರೆ ಇಂತಹ ಹುಚ್ಚಾಟಗಳಿಗೆ ಕೊನೆಯೇ ಇಲ್ಲವೇನೋ ಎನಿಸುತ್ತದೆ. ಜೀವಕ್ಕಿಂತ ದೊಡ್ಡದಾ ಈ ಸಾಹಸಗಳು? ಅರೆಕ್ಷಣದ ಖುಷಿ, ಸಾಹಸಕ್ಕಾಗಿ ಜೀವವನ್ನೇ ಪಣಕ್ಕಿಡುವ ಇಂತಹ ಯುವಕರ ಹುಚ್ಚುತನಕ್ಕೆ ಏನನ್ನಬೇಕು ನೀವೇ ಹೇಳಿ?