ಪಿಪಿಇ ಕಿಟ್ ನ ಲಾಭ ಬಳಸಿ ಹತ್ಯೆ ಮಾಡಿದರು!

Webdunia
ಮಂಗಳವಾರ, 29 ಜೂನ್ 2021 (12:05 IST)
ಲಕ್ನೋ: ಕೊರೋನಾ ಸೋಂಕಿತರಿಗೆ, ಸೋಂಕಿತರನ್ನು ಶುಶ್ರೂಷೆ ಮಾಡುವವರಿಗೆ ಉಪಯೋಗವಾಗುವ ಪಿಪಿಇ ಕಿಟ್ ಈಗ ಕೊಲೆಗಡುಕರಿಗೂ ವರದಾನವಾಗಿದೆ. ಉತ್ತರ ಪ್ರದೇಶದಲ್ಲಿ ಇಂತಹ ಮೈ ಜಿಲ್ಲೆನಿಸುವ ಘಟನೆ ನಡೆದಿದೆ.


23 ವರ್ಷದ ಸಚಿನ್ ಎಂಬ ಯುವಕನನ್ನು ಹತ್ಯೆ ಮಾಡಿದ ಹಂತಕರು ಮೃತದೇಹವನ್ನು ಕೊರೋನಾದಿಂದ ಮೃತಪಟ್ಟಂತೆ ಪ್ಯಾಕ್ ಮಾಡಿದ್ದಲ್ಲದೆ, ತಾವೂ ಪಿಪಿಇ ಕಿಟ್ ಧರಿಸಿ ಮೃತದೇಹವನ್ನು ಸದ್ದಿಲ್ಲದೇ ಮಣ್ಣು ಮಾಡಿ ಎಸ್ಕೇಪ್ ಆಗಲು ಹೊರಟಿದ್ದಾರೆ.

ಮೃತಪಟ್ಟ ಯುವಕನ ತಂದೆ ಶ್ರೀಮಂತ ಉದ್ಯಮಿಯಾಗಿದ್ದರು. ಹಂತಕರಲ್ಲಿ ಓರ್ವನಿಗೆ 40 ಲಕ್ಷ ರೂ. ಸಾಲವಿತ್ತು. ಅದನ್ನು ತೀರಿಸಲು ಇತರ ಸಹಚರರೊಂದಿಗೆ ಸೇರಿಕೊಂಡು ಸಚಿನ್ ನನ್ನು ಅಪಹರಿಸಿದ್ದರು. ಬಳಿಕ ಆತನ ತಂದೆಯಿಂದ 2 ಕೋಟಿ ರೂ. ಪೀಕಲು ಪ್ಲ್ಯಾನ್ ಮಾಡಿದ್ದರು. ಆದರೆ ಕಂಠಪೂರ್ತಿ ಮದ್ಯ ಸೇವಿಸಿದ್ದ ಆರೋಪಿಗಳು ಸಚಿನ್ ನನ್ನು ಹತ್ಯೆ ಮಾಡಿದ್ದು, ಬಳಿಕ ಪಿಪಿಇ ಕಿಟ್ ಧರಿಸಿ ಮಣ್ಣು ಮಾಡಿದ್ದಾರೆ. ಬಳಿಕ ಸಚಿನ್ ತಾಯಿಗೆ ಆತನ ಫೋನ್ ನಿಂದಲೇ ಕರೆ ಮಾಡಿ ಹಣ ಕೊಡುವಂತೆ ಪೀಡಿಸಿದ್ದಾರೆ. ಆದರೆ ಮೊಬೈಲ್ ಜಾಡು ಹಿಡಿದು ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಟ್ಟೆ ಪ್ರಿಯರೇ ಹುಷಾರ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಮುಗಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಂಜಯ್ ಸರೋಗಿ ಹೆಗಲಿಗೆ

ಮದ್ಯಪಾನ ಪಾರ್ಟಿ ವೇಳೆ ಜಗಳ, ಒಬ್ಬನ ಹತ್ಯೆಯಲ್ಲಿ ಅಂತ್ಯ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್

ಮುಂದಿನ ಸುದ್ದಿ
Show comments